ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಸಾಲುಂಡಿ ಗ್ರಾಮದಲ್ಲಿ ಮದ್ಯಾಹ್ನದ ವೇಳೆ ಕಾಣಿಸಿಕೊಂಡ ಬೆಂಕಿಗೆ ಕಬ್ಬಿನ ಗದ್ದೆ ಸಂಪೂರ್ಣ ಭಸ್ಮವಾಗಿದೆ.
ಕಟಾವಿಗೆ ಬಂದಿದ್ದ ಸುಮಾರು20 ಎಕರೆಗೂ ಅಧಿಕ ಕಬ್ಬು ಬೆಂಕಿಗಾಹುತಿಯಾಗಿ ಭಸ್ಮವಾಗಿದೆ. 4-5 ರೈತರಿಗೆ ಸೇರಿದ್ದ ಈ ಕಬ್ಬಿನ ಗದ್ದೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದು ಕಣೆದುರೇ ತಮ್ಮ ಶ್ರಮ ಸುಟ್ಟುಹೋಗುವುದನ್ನು ನೋಡಲಾಗದೆ ರೈತರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಸಂಪೂರ್ಣ ಫಸಲು ಭಸ್ಮವಾದ ಕಾರಣ ರೈತರು ಕಂಗಾಲಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ.