ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಹಾಸಪಟ್ಟ ರೈತ | Farmer rescued cow and buffalo from fire in belagavi


ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಹಾಸಪಟ್ಟ ರೈತ

ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಹಾಸಪಟ್ಟ ರೈತ

ಬೆಳಗಾವಿ: ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ರೈತ ಹರಸಹಾಸ ಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ತೋಟದ ಮನೆ ಹತ್ತಿಕೊಂಡು ಉರಿದಿದ್ದು ಪ್ರಾಣದ ಹಂಗು ತೊರೆದು ಜಾನುವಾರು ರಕ್ಷಣೆಗೆ ರೈತ ಹರಸಹಾಸ ಪಟ್ಟಿದ್ದಾರೆ.

ಅವರೊಳ್ಳಿ ಗ್ರಾಮದಲ್ಲಿ ತಡರಾತ್ರಿ ನವರತ್ನ ಜೋಳದ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಜೀವವನ್ನೂ ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ ಜಾನುವಾರು ರಕ್ಷಣೆ ಮಾಡಿದ್ದಾರೆ. 1 ಕರು ಬೆಂಕಿಗಾಹುತಿಯಾಗಿದ್ದು 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯಗಳಾಗಿವೆ. ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಯಲ್ಲವೂ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದೆ. ಅಂದಾಜು 80 ಸಾವಿರಕ್ಕೂ ಹೆಚ್ಚು ಹಾನಿ ಸಂಭವಿಸಿದೆ. ನಂದಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV9 Kannada


Leave a Reply

Your email address will not be published. Required fields are marked *