ನವದೆಹಲಿ: ಮಧ್ಯ ಪ್ರದೇಶದ ಮಾಜಿ ಸಿಎಂ ಮುಖ್ಯಮಂತ್ರಿ ಕಮಲ್​​ ನಾಥ್​​ ಕಾಂಗ್ರೆಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಬೆಂಕಿ ಹಂಚಿ ಎಂದು ಕರೆ ನೀಡಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

ವಿಡಿಯೋ ಬಿಡುಗಡೆ ಮಾಡಿರುವ ಬಿಜೆಪಿ ಕಮಲ್​​ನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕೇಂದ್ರ ಸರ್ಕಾರ ವಿರುದ್ಧ ರೈತ ಸಂಘಟನೆಗಳು ಮಾಡುತ್ತಿರುವ ಪ್ರತಿಭಟನೆಗಳನ್ನ ಬಳಿಸಿಕೊಂಡು ಹಿಂಸಾಚಾರ ಸೃಷ್ಟಿಸಲು ಕರೆ ನೀಡಿದ್ದಾರೆ ಎಂದು ಆರೋಪಿಸಿದೆ.

ವರ್ಚುವಲ್​​ ಸಭೆಯ 20 ಸೆಕೆಂಡ್​​​ಗಳ ವಿಡಿಯೋದಲ್ಲಿ ಕಮಲ್​​ ನಾಥ್​ ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಮಾತನಾಡಿದ್ದು, ರೈತರಿಗೆ ನ್ಯಾಯ ದೊರಕುವುದು ಮೊದಲ ಕೆಲಸವಾದರೆ, ಬೆಂಕಿ ಹಚ್ಚುವುದು ಎರಡನೇ ಕೆಲಸ. ಅಲ್ಲದೇ ಇದನ್ನು ಮಾಡಲು ಇದು ಸರಿಯಾದ ಸಮಯ ಎಂದು ನೀಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ದೇಶ ಸಂಕಷ್ಟ ಎದುರಿಸುತ್ತಿದ್ರು, ಲಾಕ್​​ಡೌನ್​​​ ನಿಯಮಗಳನ್ನು ಬ್ರೇಕ್​ ಮಾಡಿ ರಸ್ತೆ ಇಳಿಯಿರಿ ಹಾಗೂ ಬಿಜೆಪಿ ವಿರುದ್ಧ ಬೃಹತ್​ ಹೋರಾಟ ಮಾಡಿ ರೈತರಿಗೆ ನ್ಯಾಯ ನೀಡಿ ಎಂದು ಕಮಲ್​​ ನಾಥ್ ಹೇಳಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.

ಬಿಜೆಪಿ ನಾಯಕ ವಿ.ಡಿ. ಶರ್ಮಾ ವಿಡಿಯೋವನ್ನು ತಮ್ಮ ಟ್ವೀಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಬಿಡುಗಡೆ ಬಳಿಕ ಪ್ರತಿಕ್ರಿಯೆ ನೀಡಿರುವ ಹಲವು ಬಿಜೆಪಿ ನಾಯಕರು, ಮಾಜಿ ಸಿಎಂ ಆಗಿ ಕಮಲ್​​​​ನಾಥ್ ಇಂತಹ ಕರೆ ನೀಡುವುದು ಎಷ್ಟು ಸರಿ. ಕೊರೊನಾ ವಿರುದ್ಧ ಶಕ್ತಿ ಮೀರಿ ಹೋರಾಡುತ್ತಿರುವ ಸಂದರ್ಭದಲ್ಲಿ ಜನರ ನೆರವಿಗೆ ಧವಿಸದೆ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 6 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆಯೇ ದೇಶದಲ್ಲಿ ನಡೆದಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿರೈತರ ಪ್ರತಿಭಟನೆಗಳು ಹೆಚ್ಚು ಪ್ರಭಾವ ಬೀರಿದ್ದವು. ಅಲ್ಲದೇ ಭಾರತೀಯ ಕಿಸಾನ್ ಯೂನಿಯನ್​ ಮುಖ್ಯಸ್ಥರ ಎಲ್ಲಾ ರಾಜ್ಯಗಳಲ್ಲಿ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಮತ ನೀಡುವಂತೆ ಕರೆ ನೀಡಿದ್ದರು.

The post ‘ಬೆಂಕಿ ಹಚ್ಚಿ’ ಅಂತ ಕಾಂಗ್ರೆಸ್​ ಕಾರ್ಯಕರ್ತರಿಗೆ ಕಮಲ್​ನಾಥ್ ಕರೆ? ಬಿಜೆಪಿಯಿಂದ ವಿಡಿಯೋ ಬಿಡುಗಡೆ appeared first on News First Kannada.

Source: newsfirstlive.com

Source link