ಬೆಂಗಳೂರು: ರಾಜ್ಯದಲ್ಲಿ ಇಂದು 38,077 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,846 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,45,923 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 16,387 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 26,35,122ಕ್ಕೆ ಏರಿಕೆಯಾಗಿದೆ.

ಇಂದು 21,199 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 23,12,060 ಮಂದಿ ಗುಣಮುಖರಾದಂತಾಗಿದೆ. ಇಂದು 463 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 30,017ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 2,93,024 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 4095 ಹೊಸ ಪ್ರಕರಣಗಳು ದಾಖಲಾಗಿ, 307 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬಳ್ಳಾರಿಯಲ್ಲಿ 526, ಬೆಳಗಾವಿ 1006, ದಾವಣಗೆರೆ 535, ದಕ್ಷಿಣ ಕನ್ನಡ 618, ಹಾಸನ 520, ಮಂಡ್ಯ 711, ಮೈಸೂರು 1687, ತುಮಕೂರು 882, ಉಡುಪಿ 636 ಹಾಗೂ ಉತ್ತರ ಕನ್ನಡದಲ್ಲಿ 456 ಪ್ರಕರಣಗಳು ದಾಖಲಾಗಿವೆ. ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ 11.22ಕ್ಕೆ ಬಂದು ನಿಂತಿದೆ.

The post ಬೆಂಗಳೂರಲ್ಲಿ ಇಂದು 307 ಮಂದಿ ಬಲಿ..ರಾಜ್ಯದಲ್ಲಿ ಮೃತರ ಸಂಖ್ಯೆ 30,017ಕ್ಕೆ ಏರಿಕೆ appeared first on News First Kannada.

Source: newsfirstlive.com

Source link