ಬೆಂಗಳೂರಲ್ಲಿ ಎಲ್ಲೆಲ್ಲೂ ಟ್ರಾಫಿಕ್​ ಜಾಮ್​.. ರಾತ್ರಿಯಾದ್ರೂ ಕಡಿಮೆಯಾಗದ ವೆಹಿಕಲ್ಸ್

ಬೆಂಗಳೂರಲ್ಲಿ ಎಲ್ಲೆಲ್ಲೂ ಟ್ರಾಫಿಕ್​ ಜಾಮ್​.. ರಾತ್ರಿಯಾದ್ರೂ ಕಡಿಮೆಯಾಗದ ವೆಹಿಕಲ್ಸ್

ಬೆಂಗಳೂರು: ಬೆಂಗಳೂರಿನಲ್ಲಿ ಅನ್​ಲಾಕ್ ಆಗಿ ಇನ್ನೂ 24 ಗಂಟೆಯಾಗಿಲ್ಲ.. ಆಗ್ಲೇ ನಗರದಲ್ಲಿ ಹಲವೆಡೆ ಕಿಲೋ ಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್​ ಆಗಿದೆ.

ಬೆಂಗಳೂರು ಸಿಟಿ ಎಸ್ ಪಿ ರೋಡ್, ಕೆಆರ್ ಸರ್ಕಲ್, ಕೆಆರ್  ಮಾರ್ಕೆಟ್​​ನಲ್ಲಿ ಟ್ರಾಫಿಕ್​ನಿಂದಾಗಿ ಕಿಲೋ ಮೀಟರ್​ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿದ್ದವು. ಅಷ್ಟೇ ಅಲ್ಲದೇ ಫ್ರೀಡಂ ಪಾರ್ಕ್ ರಸ್ತೆ ಬಳಿಯೂ ಫುಲ್ ಜಾಂ ಆಗಿದ್ದು ಸದ್ಯ ಜನರನ್ನ, ವಾಹನಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಏಳು ಗಂಟೆಗೆ ನೈಟ್ ಕರ್ಫ್ಯೂ ಜಾರಿಯಾಗಿದ್ದರೂ ಸಹ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಿಲ್ಲ.

The post ಬೆಂಗಳೂರಲ್ಲಿ ಎಲ್ಲೆಲ್ಲೂ ಟ್ರಾಫಿಕ್​ ಜಾಮ್​.. ರಾತ್ರಿಯಾದ್ರೂ ಕಡಿಮೆಯಾಗದ ವೆಹಿಕಲ್ಸ್ appeared first on News First Kannada.

Source: newsfirstlive.com

Source link