ಬೆಂಗಳೂರು: ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ, ಕಳ್ಳತನದ ಕೇಸ್​ಗಳು ಕಡಿಮೆಯಾಗಿದೆ ಅಂತ ಬೆಂಗಳೂರು ನಗರ ಪೊಲೀಸ್ರು ಮಾಹಿತಿ ನೀಡಿದ್ದಾರೆ.

ಲಾಕ್​ಡೌನ್​ ಬಳಿಕ ಕಳ್ಳತನಕ ಶೇ.95 ರಷ್ಟು ನಿಂತು ಹೋಗಿದೆಯಂತೆ. ಪ್ರತಿ ತಿಂಗಳು ನೂರಾರು ಕೇಸ್ ಆಗ್ತಿದ್ದ ಕಳ್ಳತನದ ಪ್ರಕರಣಗಳು, ಈ ಬಾರಿ ಕೇವಲ 10-20 ಆಗಿದೆ ಅಂತ ಹೇಳ್ತಿದ್ದಾರೆ. ಹೀಗಾಗಿ, ಕಳ್ಳರ ಮನಸ್ಥಿತಿಯ ಬಗ್ಗೆ ಪೊಲೀಸ್ರಿಂದ ಪರಿಶೀಲನೆ ನಡೆದಿದ್ದು, ಸಿಕ್ಕಿಬಿದ್ದ ಕೆಲ ಕಳ್ಳರನ್ನ ಮಾತನಾಡಿಸಿದ ಬೆಂಗಳೂರು ಪೊಲೀಸ್ರಿಗೆ ಕೆಲವಷ್ಟು ಮಾಹಿತಿ ಲಭ್ಯವಾಗಿದೆ. ಈ ವೇಳೆ ಕಳ್ಳರು ಹೇಳಿದ ಕೆಲ ಕಾರಣಗಳನ್ನು ಪೊಲೀಸರು ಮುಂದಿಟ್ಟಿದ್ದಾರೆ.

ಕಳ್ಳತನ ಕಡಿಮೆಗಯಾಗಲು ಈ ಅಂಶಗಳು ಕಾರಣವಂತೆ..
1. ಕಳ್ಳರಿಗೆ ಕೊರೊನಾ ಬಗ್ಗೆ ಭಯ ಬಂದಿದೆ
2. ಕೊರೊನಾ ಜೊತೆ ಒಂಟಿಯಾಗಿ ಓಡಾಡುವ ಭಯ
3. ಒಂಟಿಯಾಗಿ ಓಡಾಡಿದ್ರೆ ಜನ್ರಿಗೆ ಅನುಮಾನ ಜಾಸ್ತಿ
4. ಪೊಲೀಸರ ಬೀಟ್ ಜಾಸ್ತಿಯಾಗಿದ್ದು, ಪ್ರಶ್ನೆ ಮಾಡ್ತಾರೆ
5. ಗುಂಪು ಇಲ್ಲಾಂದ್ರೆ ಕಳ್ಳತನ ಮಾಡಲು ಭಯ ಪಡ್ತಾರಂತೆ
6. ಲಾಕ್ಡೌನ್ ಹಿನ್ನೆಲೆ ಬಹುತೇಕ ಜನರು ಮನೆಯಲ್ಲೇ ಇದ್ದಾರೆ
7. ಬೆಲೆಬಾಳುವ ವಸ್ತುಗಳನ್ನ, ಅಂಗಡಿಯಿಂದ ಶಿಫ್ಟ್ ಮಾಡಿದ್ದಾರೆ
8. ಕನ್ನ ಹಾಕಿದ್ರೂ ಚಿಲ್ಲರೆ ಪಲ್ಲರೆ ಸಿಗಬಹುದು ಅನ್ನೋ ಕಾರಣ
9. ಕದ್ದ ವಸ್ತು ಡಿಸ್ಪೋಸ್ ಮಾಡಲು ಅವಕಾಶವಿಲ್ಲದ ಕಾರಣ
10. ಆಭರಣ ಧರಿಸುವವರು, ಮನೆಯಾಚೆ ಬಾರದಿರುವುದು
11. ಕೆಲ ಅಂಗಡಿಯಲ್ಲಿ ಸಿಬ್ಬಂದಿ ಉಳಿಯಲು ವ್ಯವಸ್ಥೆ ಮಾಡಿರೋದು

ಈ ಎಲ್ಲಾ ಕಾರಣಗಳನ್ನ, ಕೆಲ ಕಳ್ಳರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಪೊಲೀಸ್​ ನ್ಯೂಸ್​ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ.

The post ಬೆಂಗಳೂರಲ್ಲಿ ಕಳ್ಳತನದ ಕೇಸ್​​ ಭಾರೀ ಇಳಿಕೆ: ಇದಕ್ಕೆ ಕಳ್ಳರೇ ಹೇಳಿರೋ ಕಾರಣಗಳಿವು.. appeared first on News First Kannada.

Source: newsfirstlive.com

Source link