ಬೆಂಗಳೂರಲ್ಲಿ ಕುಸಿದು ಬಿತ್ತು ಮತ್ತೊಂದು ಹಳೆಯ ಕಟ್ಟಡ, ಅವೆನ್ಯೂ ರಸ್ತೆಯಲ್ಲಿ ಘಟನೆ, ಪ್ರಾಣಾಪಾಯವಿಲ್ಲ | Another building comes down crumbling in Bengaluru, no casualtiesಬೆಳಗಿನ ಸಮಯದಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿತ್ತು. ಅದಾಗಲೇ ಶಿಥಿಲಗೊಂಡಿದ್ದ ಕಟ್ಟಡ ಮಳೆಯ ಹೊಡೆತ ತಾಳಲಾಗದೆ ಕುಸಿದುಬಿದ್ದಿದೆ ಎಂದು ಹೇಳಲಾಗುತ್ತಿದೆ.

TV9kannada Web Team


| Edited By: Arun Belly

Aug 06, 2022 | 2:35 PM
ಬೆಂಗಳೂರು ನಗರದ ಅವೆನ್ಯೂ ರಸ್ತೆಯಲ್ಲಿರುವ (Avenue Road) ಬಸವ ದೇವಸ್ಥಾನ ಪಕ್ಕದ ಕಟ್ಟಡವೊಂದು ಶನಿವಾರ ಬೆಳಗಿನ ಜಾವ ಮೂರುಗಂಟೆಗೆ ಕುಸಿದು ಬಿದ್ದಿದೆ. ಈ ಕಟ್ಟಡದಲ್ಲಿ ಪ್ಲಾಸ್ಟಿಕ್ ಮತ್ತು ಗಿಫ್ಟ್ (gift) ಸಾಮಾನುಗಳ ಅಂಗಡಿಗಳಿದ್ದವು. ರಾತ್ರಿಯ ಸಮಯ ಕಟ್ಟಡ ಕುಸಿದಿರುವುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗಿನ ಸಮಯದಲ್ಲೇ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಸ್ಥಳಕ್ಕೆ ಧಾವಿಸಿತ್ತು. ಅದಾಗಲೇ ಶಿಥಿಲಗೊಂಡಿದ್ದ ಕಟ್ಟಡ ಮಳೆಯ ಹೊಡೆತ ತಾಳಲಾಗದೆ ಕುಸಿದುಬಿದ್ದಿದೆ ಎಂದು ಹೇಳಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *