ಬೆಂಗಳೂರು: ರಾಜ್ಯದಲ್ಲಿ ಇಂದು 48,428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 84172 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,32,600 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 5041 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 27,77,010ಕ್ಕೆ ಏರಿಕೆಯಾಗಿದೆ.

ಇಂದು 14,785ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 25,81,559 ಮಂದಿ ಗುಣಮುಖರಾದಂತಾಗಿದೆ. ಇಂದು 115 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 33148ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 1,62,282 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 985 ಹೊಸ ಪ್ರಕರಣಗಳು ದಾಖಲಾಗಿ, 16 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬಳ್ಳಾರಿ 122, ಬೆಳಗಾವಿ 95, ಚಿಕ್ಕಮಗಳೂರು 224, ದಕ್ಷಿಣ ಕನ್ನಡ 482, ದಾವಣಗೆರೆ 183, ಧಾರವಾಡ 65, ಹಾಸನ 522, ಮಂಡ್ಯ 213, ಮೈಸೂರು 490, ಶಿವಮೊಗ್ಗ 285, ತುಮಕೂರು 329, ಉಡುಪಿ 107 ಹಾಗೂ ಉತ್ತರ ಕನ್ನಡದಲ್ಲಿ 122 ಪ್ರಕರಣಗಳು ದಾಖಲಾಗಿವೆ. ಇನ್ನು ಬೀದರ್​​​​​ನಲ್ಲಿ ರಾಜ್ಯದಲ್ಲಿಯೇ ಅತೀ ಕಡಿಮೆ ಅಂದ್ರೆ 2 ಕೊರೊನಾ ಪ್ರಕರಣ ದಾಖಲಾಗಿದೆ. ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ ಕುಸಿದಿದ್ದು, 3.80%ಕ್ಕೆ ಬಂದು ನಿಂತಿದೆ. ಮೃತಪಟ್ಟವರ ಶೇಕಡವಾರು ಪ್ರಮಾಣ ಶೇಕಡಾ 2.28%ಕ್ಕೆ ನಿಂತಿದೆ.

The post ಬೆಂಗಳೂರಲ್ಲಿ ಕೇವಲ 985 ಹೊಸ ಕೇಸ್​; ರಾಜ್ಯದಲ್ಲಿ ಶೇ.3.80 ಪಾಸಿಟಿವಿಟಿ ರೇಟ್ appeared first on News First Kannada.

Source: newsfirstlive.com

Source link