ಬೆಂಗಳೂರು: ರಾಜ್ಯದಲ್ಲಿ ಇಂದು 14,275 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 94,448 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,08,723 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 25,311 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 24,50,215ಕ್ಕೆ ಏರಿಕೆಯಾಗಿದೆ.

ಇಂದು 57,333 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 19,83,948 ಮಂದಿ ಗುಣಮುಖರಾದಂತಾಗಿದೆ. ಇಂದು 529 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25,811ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 44,0435 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 5,701 ಹೊಸ ಪ್ರಕರಣಗಳು ದಾಖಲಾಗಿ, 297 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬಳ್ಳಾರಿಯಲ್ಲಿ 807, ಬೆಳಗಾವಿ 747, ಧಾರವಾಡ 1058, ದಕ್ಷಿಣ ಕನ್ನಡ 721, ಮಂಡ್ಯ 888, ಹಾಸನ 1156, ಮೈಸೂರು 2680, ಶಿವಮೊಗ್ಗ 730, ತುಮಕೂರು 1662, ಉಡುಪಿ 927 ಹಾಗೂ ಉತ್ತರ ಕನ್ನಡದಲ್ಲಿ 1110 ಪ್ರಕರಣಗಳು ದಾಖಲಾಗಿವೆ.

 

The post ಬೆಂಗಳೂರಲ್ಲಿ ಕೊಂಚ ತಗ್ಗಿದ ಕೊರೊನಾ ಅಬ್ಬರ.. ರಾಜ್ಯದಲ್ಲಿಂದು 529 ಸೋಂಕಿತರು ಬಲಿ appeared first on News First Kannada.

Source: newsfirstlive.com

Source link