ಬೆಂಗಳೂರು: ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಅಧಿಕವಾಗುತ್ತಿದೆ, ಕೇವಲ 6 ದಿನಗಳಲ್ಲಿ ಬರೋಬ್ಬರಿ 1,07,021 ಕೇಸ್​ಗಳು ನಗರದಲ್ಲಿ ದಾಖಲಾಗಿವೆ.

ದಿನೇ ದಿನೇ ಏರುತ್ತಲೇ ಇರುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚವೂ ಇಳಿಮುಖವಾಗುತ್ತಿಲ್ಲ. ಏಪ್ರಿಲ್​ 19 ರಲ್ಲಿ 9618 ಇದ್ದ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ನಗರದಲ್ಲಿ ನಿನ್ನೆ ಒಂದೇ ದಿನ 20,733 ಜನರಿಗೆ ಕೊರೊನಾ ವಕ್ಕರಿಸಿದೆ. ಏಪ್ರಿಲ್​ 24 ರಿಂದ ಕೊರೊನಾ ಸೋಂಕಿತರ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಏಪ್ರಿಲ್​ 24 ರಂದು ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ 149 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 6 ದಿನದಲ್ಲಿ 1,07,021 ಹೊಸಾ ಪ್ರಕರಣಗಳು ದಾಖಲಾದರೆ, 677 ಮಂದಿ ಕೊರೊನಾಗೆ ಜೀವ ತೆತ್ತಿದ್ದಾರೆ.

ಯಾವ್ಯಾವದಿನ ಎಷ್ಟೇಷ್ಟು ಕೇಸ್​ಗಳು ದಾಖಲಾಗಿದೆ ಎಂದು ನೋಡೋದಾದರೆ

  • ಏಪ್ರಿಲ್​ 19 – 9618 ಪ್ರಕರಣ ದಾಖಲು  – 97 ಮಂದಿ ಸಾವು
  • ಏಪ್ರಿಲ್ 20 – 13782 ಪ್ರಕರಣ ದಾಖಲು – 92 ಮಂದಿ ಸಾವು
  • ಏಪ್ರಿಲ್ 21 – 13640 ಪ್ರಕರಣ ದಾಖಲು – 70 ಮಂದಿ ಸಾವು
  • ಏಪ್ರಿಲ್ 22 – 15244 ಪ್ರಕರಣ ದಾಖಲು – 68 ಮಂದಿ ಸಾವು
  • ಏಪ್ರಿಲ್ 23 – 16662 ಪ್ರಕರಣ ದಾಖಲು – 124 ಮಂದಿ ಸಾವು
  • ಏಪ್ರಿಲ್ 24 – 17342 ಪ್ರಕರಣ ದಾಖಲು – 149 ಮಂದಿ ಸಾವು
  • ಏಪ್ರಿಲ್ 25 – 20733 ಪ್ರಕರಣ ದಾಖಲು – 77 ಮಂದಿ ಸಾವು

ಒಟ್ಟು-1,07,021 ಪ್ರಕರಣಗಳು ದಾಖಲಾದರೆ, 677 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

The post ಬೆಂಗಳೂರಲ್ಲಿ ಕೊರೊನಾ ಆರ್ಭಟ; 6 ದಿನದಲ್ಲಿ ದಾಖಲಾದದ್ದು ಬರೋಬ್ಬರಿ 1,07,021 ಕೇಸ್​ appeared first on News First Kannada.

Source: News First Kannada
Read More