ಬೆಂಗಳೂರು: ಕೊರೊನಾ ಎರಡನೇ ಅಲೆ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ನಡುವೆ ಸರ್ಕಾರ ನಿಯಮಗಳನ್ನು ಜಾರಿಗೊಳಿಸಲು ಪೊಲೀಸರು ನಗರದಲ್ಲಿ ಫೀಲ್ಡ್ ಗಿಳಿದು ನಿಯಮಗಳ ಪಾಲಿಸ ಜನರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಆ ಮೂಲಕ ಕಳೆದ ಒಂದೂವರೆ ತಿಂಗಳಲ್ಲಿ 3 ಕೋಟಿ ರೂಪಾಯಿಗೂ ದಂಡವನ್ನು ಸಂಗ್ರಹಿಸಿದ್ದಾರೆ.

ಏಪ್ರಿಲ್ 1 ರಿಂದ ಮೇ 14 ರವರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡದ ವಿರುದ್ಧ ಕೇಸ್ ದಾಖಲಿಸಿ 3 ಕೋಟಿ 27 ಲಕ್ಷದ 79 ಸಾವಿರದ 827 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ನಗರದ 8 ವಿಭಾಗಗಳ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ನಗರದ 8 ವಿಭಾಗಗಳಿಂದ 1 ಲಕ್ಷದ 35 ಸಾವಿರ 894 ಕೇಸ್ ದಾಖಲಿಸಿದ್ದಾರೆ.

ವಿಭಾಗವಾರು ದಾಖಲಾದ ಪ್ರಕರಣಗಳು… ದಂಡದ ವಿವರ ಇಂತಿದೆ

  1. ಪೂರ್ವ ವಿಭಾಗ -21,040 ಕೇಸ್ ದಾಖಲು – 5 ಲಕ್ಷದ 84 ಸಾವಿರದ 808 ರೂ ದಂಡ ವಸೂಲಿ (5,084,808)
  2. ಆಗ್ನೇಯ ವಿಭಾಗ -17,877 ಕೇಸ್ ದಾಖಲು – 43 ಲಕ್ಷದ 6 ಸಾವಿರದ 808 ರೂ ದಂಡ ವಸೂಲಿ (43,06,808)
  3. ಈಶಾನ್ಯ ವಿಭಾಗ -10,622 ಕೇಸ್ ದಾಖಲು – 25 ಲಕ್ಷದ 7 ಸಾವಿರದ 466 ರೂ ದಂಡ ವಸೂಲಿ ( 25,07,466)
  4. ವೈಟ್ ಫೀಲ್ಡ್ ವಿಭಾಗ -10,801 ಕೇಸ್ ದಾಖಲು – 26 ಲಕ್ಷದ 21 ಸಾವಿರದ 558 ರೂ ದಂಡ ವಸೂಲಿ (26,21,558)
  5. ಪಶ್ಚಿಮ ವಿಭಾಗ -20,592  ಕೇಸ್ ದಾಖಲು – 50 ಲಕ್ಷದ 41 ಸಾವಿರದ 497 ರೂ ದಂಡ ವಸೂಲಿ (50,41,497)
  6. ಉತ್ತರ ವಿಭಾಗ -16,809 ಕೇಸ್ ದಾಖಲು – 40 ಲಕ್ಷ 25 ಸಾವಿರದ 533 ರೂ ದಂಡ ವಸೂಲಿ (40,25,533)
  7. ದಕ್ಷಿಣ ವಿಭಾಗ – 26,987 ಕೇಸ್ ದಾಖಲು – 65 ಲಕ್ಷದ 33 ಸಾವಿರದ 830 ರೂ ದಂಡ ವಸೂಲಿ (65,33,830)
  8. ಕೇಂದ್ರ ವಿಭಾಗ -11,1066 ಕೇಸ್ ದಾಖಲು – 27 ಲಕ್ಷದ 66 ಸಾವಿರದ 342 ರೂ ದಂಡ ವಸೂಲಿ (27,66,342)

The post ಬೆಂಗಳೂರಲ್ಲಿ ಕೊರೊನಾ ರೂಲ್ಸ್​ ಬ್ರೇಕ್​​; ₹3.27 ಕೋಟಿ ದಂಡ ವಸೂಲಿ appeared first on News First Kannada.

Source: newsfirstlive.com

Source link