ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದಾಗಿ ಕೂಲಿ ಕಾರ್ಮಿಕರು, ಬಡ ಬಗ್ಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ಟಿ.ಎ. ಶರವಣ, ಅಪ್ಪಾಜಿ ಕ್ಯಾಂಟೀನ್​ ಮೂಲಕ ಉಚಿತವಾಗಿ ಊಟವನ್ನ ನೀಡುತ್ತಿದ್ದಾರೆ. ಇದರ ಮುಂದುರಿದ ಭಾಗವಾಗಿ, ನಾಳೆಯಿಂದ ‘ನಮ್ಮ ದೇವೇಗೌಡ ಸಂಚಾರಿ ಅಪ್ಪಾಜಿ ಕ್ಯಾಂಟೀನ್​’ನನ್ನ ಆರಂಭಿಸಲಿದ್ದಾರೆ.

ಡಾ.ಟಿ.ಎ. ಶರವಣ ಹಾಗೂ ಜೆಡಿಎಸ್​ನ ಪ್ರಮುಖ ಮುಖಂಡರುಗಳು ನಾಳೆಯಿಂದ ‘ನಮ್ಮ ದೇವೇಗೌಡ ಸಂಚಾರಿ ಅಪ್ಪಾಜಿ ಕ್ಯಾಂಟೀನ್’ ಸೇವೆ ಆರಂಭಿಸಲಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಅನೇಕರು ಹಸಿವಿನಿಂದ ತತ್ತರಿಸುತ್ತಿರುವುದನ್ನು ತಪ್ಪಿಸುವ ಉದ್ದೇಶ ಇದಾಗಿದೆ.

ಇಲ್ಲಿ ಉಚಿತವಾಗಿ ಊಟದ ಪ್ಯಾಕೆಟ್​ಗಳನ್ನ ವಿತರಿಸಲಾಗುತ್ತದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಕೆ.ಆರ್.ಮಾರ್ಕೆಟ್ ಬಳಿಯಿರುವ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದ ಗೇಟ್​ ಬಳಿ ಈ ಸೇವೆಗೆ ಚಾಲನೆ ಸಿಗಲಿದೆ.

The post ಬೆಂಗಳೂರಲ್ಲಿ ನಾಳೆಯಿಂದ ಬಡವರ ಹಸಿವು ನೀಗಿಸಲಿದೆ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ appeared first on News First Kannada.

Source: newsfirstlive.com

Source link