ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ! | Boy died after falling into the pits of the park at Bengaluru

ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ!

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿ ಎಡವಟ್ಟಿನಿಂದ ಬೆಂಗಳೂರಿನಲ್ಲಿ ಒಂಬತ್ತು ವರ್ಷದ ಬಾಲಕ ಬಲಿಯಾಗಿದ್ದಾನೆ. ನಿರ್ವಹಣೆ ಇಲ್ಲದ ಪಾರ್ಕ್ನ ಹೊಂಡದಲ್ಲಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಆಟವಾಡುವ ವೇಳೆ ನೀರಿನ ಹೊಂಡದಲ್ಲಿ ಬಿದ್ದು ಪ್ರತಾಪ್ ಎಂಬ ಬಾಲಕ ಸಾವನ್ನಪ್ಪಿದ್ದು, ಮಲ್ಲಸಂದ್ರದ ಕೆಂಪೇಗೌಡ ಪಾರ್ಕ್​ನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕ ರುದ್ರಮುನಿ, ಕಾಂತಮಣಿ ದಂಪತಿ ಪುತ್ರ.

ಮಳೆಯಿಂದ ಪಾರ್ಕ್​ನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಬಾಲಕ ಆಟವಾಡುವಾಗ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಮೃತ ಬಾಲಕನ ಕುಟುಂಬಕ್ಕೆ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ಬಿಬಿಎಂಪಿ ವತಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಮೂವರ ಬಂಧನ
ಮೈಸೂರು: ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮೂವರನ್ನು ಬಂಧಿಸಲಾಗಿದೆ. ಬನ್ನೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 59 ಗ್ರಾಂ ಚಿನ್ನಾಭರಣನ್ನು ವಶಕ್ಕೆ ಪಡೆದಿದ್ದಾರೆ. ಕೇತುಪುರ ಗ್ರಾಮದ ತಾಯಮ್ಮ ಮನೆಯಲ್ಲಿ ಕಳವು ನಡೆದಿತ್ತು. 36 ಗ್ರಾಂ ಸರ. 10 ಗ್ರಾಂ ಬ್ರಾಸ್ಲೈಟ್. 3 ಗ್ರಾಂ ಉಂಗುರ, 4 ಗ್ರಾಂ ಓಲೆ, 6 ಗ್ರಾಂ ಹ್ಯಾಂಗಿಂಗ್ ಸೇರಿ 59 ಗ್ರಾಂ ಚಿನ್ನ ಕಳವು ಮಾಡಿದ್ದರು. ಜೊತೆಗೆ 15 ಸಾವಿರ ನಗದು ಕಳ್ಳತನ ಮಾಡಿದ್ದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು

TV9 Kannada

Leave a comment

Your email address will not be published. Required fields are marked *