ಬೆಂಗಳೂರಲ್ಲಿ ‘ಬೀಸ್ಟ್​’ ನೋಡಿ ಜನ ಏನಂದ್ರು? ಫ್ಯಾನ್ಸ್​ ಸೂಪರ್​ ಅಂದ್ರು, ಕೆಲವರು ಮುಖ ಹಿಂಡಿದ್ರು | Thalapathy Vijay starrer Beast movie gets mixed response from Bengaluru audience


ಕಾಲಿವುಡ್​ ನಟ ದಳಪತಿ ವಿಜಯ್ (Thalapathy Vijay)​ ಅವರಿಗೆ ಬೆಂಗಳೂರಲ್ಲೂ ಅಭಿಮಾನಿಗಳಿದ್ದಾರೆ. ಅವರ ಅಭಿನಯದ ‘ಬೀಸ್ಟ್​’ (Beast movie) ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿ ಜನರು ಸಂಭ್ರಮಿಸಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಳಪತಿ ವಿಜಯ್ ಅಭಿಮಾನಿಗಳು (Thalapathy Vijay Fans) ಈ ಸಿನಿಮಾ ನೋಡಿ ಸೂಪರ್​ ಎನ್ನುತ್ತಿದ್ದಾರೆ. ಆದರೆ ಎಲ್ಲ ವರ್ಗದ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಿಲ್ಲ. ಕೆಲವರು ಮುಖ ಹಿಂಡುತ್ತಾ ಚಿತ್ರಮಂದಿರದಿಂದ ಹೊರಬಂದಿದ್ದಾರೆ. ‘ಈ ಸಿನಿಮಾ ಓಕೆ, ಆದ್ರೆ ನಮಗೆ ಕೆಜಿಎಫ್​ ಇನ್ನೂ ಹೆಚ್ಚು ಇಷ್ಟ ಆಗತ್ತೆ’ ಎಂಬ ಪ್ರತಿಕ್ರಿಯೆ ಕೂಡ ಜನರಿಂದ ಕೇಳಿಬಂದಿದೆ. ಈ ಚಿತ್ರಕ್ಕೆ ಸನ್​ ಪಿಕ್ಚರ್ಸ್​ ಬಂಡವಾಳ ಹೂಡಿದ್ದು, ನೆಲ್ಸನ್​ ದಿಲೀಪ್ ​ಕುಮಾರ್ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ.

TV9 Kannada


Leave a Reply

Your email address will not be published.