ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್​ಗೆ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 14 ಮಂದಿಯಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಕಳೆದ ವಾರ ಟ್ರಸ್ಟ್​ವೆಲ್ ಆಸ್ಪತ್ರೆಯಲ್ಲಿ 38 ಮಂದಿಗೆ ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದವು.

ದಿನಕ್ಕೊಂದು ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ಕೇಸ್​ಗಳು ಪತ್ತೆಯಾಗುತ್ತಿದ್ದು.. ರಾಜ್ಯದಲ್ಲಿ ಬ್ಲಾಕ್ ಫಂಗಸ್​ಗೆ ನೀಡುವ ಔಷಧಿಗೂ ಇದೆ ಕೊರತೆ ಎನ್ನಲಾಗಿದೆ. ಲಿಪೋಸೋಮಲ್ ಆಂಪೋಟೆರಿಸಿನ್ ಬಿ ಔಷಧಕ್ಕೂ ಕೊರತೆ ಹೆಚ್ಚಾಗಿದ್ದು ಈ ಔಷಧಿಗೆ ಬೇಡಿಕೆ ಹೆಚ್ಚಿದೆಯಂತೆ.

ಇನ್ನು ಬ್ಲಾಕ್ ಫಂಗಸ್ ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡೋದು ಅಸಾಧ್ಯವಾಗಿದ್ದು ಅವರಿಗೆ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡುವುದು ಬಹಳ ಅನಿವಾರ್ಯ. ಆದರೆ ಈಗಲೇ ಕೊರೊನಾದಿಂದ ಬೆಡ್ ಕೊರತೆ ಎದುರಿಸುತ್ತಿರೋದ್ರಿಂದ ಬೆಡ್​ಗಳಿಗಾಗಿ ಮತ್ತಷ್ಟು ಹಾಹಾಕಾರ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

The post ಬೆಂಗಳೂರಲ್ಲಿ ಬ್ಲ್ಯಾಕ್​ ಫಂಗಸ್​ಗೆ ಇಬ್ಬರು ರೋಗಿಗಳು ಸಾವು appeared first on News First Kannada.

Source: newsfirstlive.com

Source link