ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದ ಬಿಬಿಎಂಪಿ ಮಾರ್ಷಲ್ಗಳು ಇತ್ತೀಚಿಗೆ ಕೊರೊನಾ ಕೊಂಚ ಕಡಿಮೆಯಾದ ಬಳಿಕ ಸೈಲೆಂಟ್ ಆಗಿದ್ದರು. ಆದರೆ ಮತ್ತೆ ರೂಪಾಂತರಿ ತಳಿಯ ಹೊಸ ವರಸೆ ಆರಂಭ ಹಿನ್ನೆಲೆ ಮತ್ತೆ ಯುನಿಫಾರ್ಮ್ ತೊಟ್ಟು ಫೀಲ್ಡ್ಗಿಳಿದಿದ್ದಾರೆ.
ಇತ್ತಿಚಿಗೆ ಕೊರೊನಾ ಕಾಲದಲ್ಲಿ ಬೆಂಗಳೂರಿನ ತುಂಬೆಲ್ಲ ಮಾಸ್ಕ್ ಮತ್ತು ಬಿಬಿಎಂಪಿ ಮಾರ್ಷಲ್ಗಳದ್ದೇ ಸುದ್ದಿಯಿತ್ತು. ಮಾಸ್ಕ್ ಇಲ್ಲದಿದ್ರೆ ದಂಡದ ಬಿಸಿ ಮುಟ್ಟಿಸಿ ಕೋವಿಡ್ ಜಾಗೃತೆ ಮೂಡಿಸುತ್ತಿದ್ದ ಮಾರ್ಷಲ್ಗಳು ಕೋವಿಡ್ ಉಲ್ಬಣದ ಹೊತ್ತಲ್ಲಿ ಫುಲ್ ಌಕ್ಟಿವ್ ಆಗಿದ್ದರು. ಇದೀಗ ಕೊರೊನಾದ ರೂಪಾಂತರಿ ತಳಿ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದಂತೆ ಮತ್ತೆ ಅಖಾಡಕ್ಕಿಳಿದಿದ್ದಾರೆ.
ಇದನ್ನೂ ಓದಿ:ವಿದೇಶಿ ಪ್ರಜೆಗಳನ್ನ ನೆಗೆಟಿವ್ ಇದ್ದರೆ ಮಾತ್ರ ಒಳಗೆ ಬಿಡ್ತೇವೆ: ಸಿಎಂ ಬೊಮ್ಮಾಯಿ
ನಗರದಲ್ಲಿ ಸದಾ ಜನಜಂಗುಳಿಯಿಂದ ತುಂಬಿರುವ ಕೆ.ಆರ್.ಮಾರುಕಟ್ಟೆಯಲ್ಲಿ 20 ಮಂದಿ ಮಾರ್ಷಲ್ಗಳನ್ನು ಬಿಬಿಎಂಪಿ ನಿಯೋಜಿಸಿದೆ. ಆದರೆ ಈ ಬಾರಿ ಫಾರ್ ಎ ಚೇಂಜ್ ಎನ್ನುವಂತೆ ದಂಡ ಪ್ರಯೋಗಕ್ಕಿಂತ ಅರಿವು ಮೂಡಿಸುವ ಯತ್ನವನ್ನು ಬಹುವಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೆಳಗಿನ ಪಾಳಿಯಲ್ಲಿ 10 ಮಂದಿ, ಮಧ್ಯಾಹ್ನದ ಪಾಳಿಯಲ್ಲಿ 10 ಮಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಾಸ್ಕ್ ಇಲ್ಲ ಅಂದ್ರೆ ದಂಡ ಮಾತ್ರ ಫಿಲ್ಸ್ ಹೀಗಾಗಿ ಇನ್ನು ಮನೆಯಿಂದ ಹೊರಡಬೇಕಾದರೆ ಒಂದು ಮುಖದ ಮೇಲೆ ಮಾಸ್ಕ್ ಇರಬೇಕು ಅಥವಾ ಜೇಬಿನಲ್ಲಿ ಕಾಸ್ ಇರಬೇಕು. ಚಾಯ್ಸ್ ಈಸ್ ಯುವರ್ರ್ಸ್.
ಇದನ್ನೂ ಓದಿ:ಮತ್ತೆ ಯುವಕರ ಕನಸುಗಳಿಗೆ ಕಚಗುಳಿಯಿಟ್ಟ ಚೆಲುವೆ -ಸೆಲ್ಫ್ ಮ್ಯಾರೇಜ್ ಸಿಸ್ಟಂ ಟ್ರೆಂಡಿಂಗ್ ಆಗ್ತಿರೋದೇಕೆ..?