ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತ ಮನೆಯನ್ನು ಸೀಲ್​​ಡೌನ್​ ಮಾಡುವ ಕಾರ್ಯವನ್ನು ಬಿಬಿಎಂಪಿ ಮತ್ತೆ ಆರಂಭ ಮಾಡಿದ್ದು, ಕೋವಿಡ್​ ಪಾಸಿಟಿವ್ ಬಂದವರನ್ನು ಸುಲಭವಾಗಿ ಗುರುತಿಸಲು ಮತ್ತು ಅವರ ಚಲನವಲನಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಹೋಂ ಐಸೋಲೇಷನ್ ನಲ್ಲಿರುವವರ ಮನೆಗಳನ್ನು ಸೀಲ್ ಡೌನ್ ಮಾಡುವ ಕ್ರಮ ಆರಂಭಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಮನೆಯಲ್ಲಿ ಒಂದು ಕೊರೊನಾ ಪಾಸಿಟಿವ್​ ಪ್ರಕರಣ ಬಂದರೂ ಇಡೀ ಕಟ್ಟಡವನ್ನೇ ಸೀಲ್​​ಡೌನ್​ ಮಾಡುವ ಮೂಲಕ ಮೈಕ್ರೋ ಕಂಟೈನ್ಮೆಂಟ್ ಝೋನ್​​ ಎಂದು ಮಾಡಲಾಗುತ್ತಿದೆ. ನಗರದ ಬಿಟಿಎಂ ಲೇಔಟ್ ನಲ್ಲಿ‌ ಮೈಕ್ರೋ ಕಂಟೈನ್ಮೆಂಟ್ ಝೋನ್ ಪ್ರಕ್ರಿಯೆ ‌ಅರಂಭವಾಗಿದೆ. ಕೊರೊನಾ ಸೋಂಕಿತರು ಇರುವ ಮನೆಗೆ ರೆಡ್​ ಟೇಪ್​ ಹಾಕುವ ಮೂಲಕ ಸೀಲ್​​ಡೌನ್​ ಮಾಡಲಾಗುತ್ತಿದ್ದು, 14 ದಿನಗಳ ಕಾಲ ಎಲ್ಲವೂ ಬಂದ್ ಆಗಲಿದೆ.

The post ಬೆಂಗಳೂರಲ್ಲಿ ಮತ್ತೆ ಶುರುವಾಯ್ತು ಮನೆ ಮನೆ ಸೀಲ್​​ಡೌನ್​​ appeared first on News First Kannada.

Source: newsfirstlive.com

Source link