ಬೆಂಗಳೂರು: ನಗರದಲ್ಲಿ ಮಾಜಿ ಎಐಡಿಎಂಕೆ ಸಚಿವ ಮಣಿಕಂದನ್​ರನ್ನ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.

ಮಣಿಕಂದನ್ ತಮಿಳುನಾಡಿನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದಾರೆ. ಅವರಿಗೆ ತಮಿಳುನಾಡು ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಬಳಿಕ ಮಣಿಕಂದನ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಚೆನ್ನೈ ಸಿಟಿ ಪೊಲೀಸ್ರು ಬೆಂಗಳೂರಿಗೆ ಬಂದು ಮಣಿಕಂದನ್​ರನ್ನ ಇಂದು ಅರೆಸ್ಟ್​ ಮಾಡಿದ್ದಾರೆ.

ಮಣಿಕಂದನ್​ಗೆ​ 2017ರಲ್ಲಿ ಮಲೇಷ್ಯಾದ ನಟಿಯೊಬ್ಬರ ಪರಿಚಯವಾಗಿತ್ತು. ಬಳಿಕ ಇಬ್ಬರೂ  ದೆಹಲಿ ಮತ್ತು ಚೆನ್ನೈನಲ್ಲಿ ಒಟ್ಟಿಗೆ ಉಳಿದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಒಮ್ಮತದಿಂದ ಕೂಡಿತ್ತು ಅಂತ ಮಣಿಕಂದನ್ ಹೇಳಿದ್ದಾರೆ. ಆದ್ರೆ ತನ್ನನ್ನು ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಾರೆ, ಬಲವಂತವಾಗಿ ಅಬಾರ್ಷನ್ ಮಾಡಿಸಿ, ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.

The post ಬೆಂಗಳೂರಲ್ಲಿ ಮಾಜಿ AIADMK ಸಚಿವ ಮಣಿಕಂದನ್ ಅರೆಸ್ಟ್​ appeared first on News First Kannada.

Source: newsfirstlive.com

Source link