ಬೆಂಗಳೂರಲ್ಲಿ ಮುಂದುವರಿದ IT ರೇಡ್; ರಾತ್ರಿಯಿಡೀ ಮೊಕ್ಕಾ ಹೂಡಿ ಪರಿಶೀಲನೆ

ಬೆಂಗಳೂರು: ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬೆಂಗಳೂರಲ್ಲಿ ನಡೆಸುತ್ತಿರುವ ದಾಳಿಯನ್ನ ಇಂದು ಕೂಡ ಮುಂದುವರಿಸಿದೆ. ನಿನ್ನೆ ಬೆಳಂ​ಬೆಳಗ್ಗಯೇ ಅಧಿಕಾರಿಗಳು ಗುತ್ತಿಗೆದಾರರು, ಚಾರ್ಟರ್ಡ್ ಅಕೌಂಟಂಟ್ಸ್, ವೆಂಡರ್​ಗಳು ಹಾಗೂ ಪ್ರಭಾವಿಗಳ ಆಪ್ತರ ಮನೆ ಮೇಲೆ ದಾಳಿ ನಡೆಸಿತ್ತು. ಈ ದಾಳಿ ರಾತ್ರಿಯಿಡೀ ಮುಂದುವರಿದು, ಇಂದೂ ಕೂಡ ಕಂಟಿನ್ಯೂ ಆಗಿದೆ.

ಸಹಕಾರನಗರ, ರಾಜಾಜಿನಗರ, ಹೆಗಡೆ ನಗರ, ಗಿರಿನಗರ ಸೇರಿ ಹಲವು ಸ್ಥಳಗಳಲ್ಲಿ ದಾಳಿ ನಡೆದಿತ್ತು. ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಉಮೇಶ್ ನಿವಾಸದಲ್ಲಿ ಮೂವರು ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು. ರಾತ್ರಿ ವೇಳೆ ಉಮೇಶ್ ನಿವಾಸಕ್ಕೆ ಆಗಮಿಸಿದ್ದ ಅಧಿಕಾರಿಗಳ ಒಂದು ತಂಡ ದಾಖಲೆಗಳನ್ನ ವಶಕ್ಕೆ ಪಡೆದು ತೆರಳಿತ್ತು. ನಂತರ ಬಂದ ಇನ್ನೊಂದು ಟೀಂ ರಾತ್ರಿಯಿಡೀ ಮೊಕ್ಕಾಂ ಹೂಡಿತ್ತು.

ದುಬೈಗೆ ತೆರಳಿದ ಉಮೇಶ್ ಆಪ್ತ
ಮತ್ತೊಂದು ಕಡೆ ಉಮೇಶ್ ಅಪ್ತ ಅರವಿಂದ್ ಮನೆಯಲ್ಲಿ ಶೋಧಕಾರ್ಯ ಮುಂದುವರಿದಿದೆ. ನಿನ್ನೆ 15 ಅಧಿಕಾರಿಗಳು ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದರು. ಇಂದು 5 ಅಧಿಕಾರಿಗಳು ಅದೇ ಶೋಧಕಾರ್ಯವನ್ನ ಮುಂದುವರಿಸಿದ್ದಾರೆ. ವಸಂತನಗರದ ಎಂಬೆಸಿ ಅಪಾರ್ಟ್ಮೆಂಟ್​​ನ 19ನೇ ಬ್ಲಾಕ್​​ನಲ್ಲಿ ಅರವಿಂದ್ ಮನೆ ಇದೆ. ಅರವಿಂದ್ ಅವರು ತಂದೆ ತಾಯಿ & ಹೆಂಡತಿ‌ ಮಕ್ಕಳ ಜೊತೆ ವಾಸವಾಗಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳು ಮನೆಯ ಸದಸ್ಯರಿಂದ ಹೇಳಿಕೆಗಳನ್ನ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಅರವಿಂದ್ ಅವರು 5 ದಿನಗಳ ಹಿಂದಷ್ಟೇ ದುಬೈಗೆ ತೆರಳಿದ್ದಾರೆ ಎನ್ನಲಾಗಿದೆ.

ಇನ್ನು ರಾಹುಲ್‌ಎಂಟರ್ ಪ್ರೈಸಸ್ ಮೇಲಿನ ದಾಳಿಯನ್ನ ಐಟಿ ಅಧಿಕಾರಿಗಳು ರಾತ್ರಿ ಅಂತ್ಯಗೊಳಿಸಿದ್ದರು. ರಾತ್ರಿ‌ 11 ಗಂಟೆಗೆ ಸುಮಾರಿಗೆ ದಾಳಿ ಮುಗಿಸಿ ಕಚೇರಿಗೆ ಬೀಗ ಹಾಕಿ ಅಧಿಕಾರಿಗಳು ತೆರಳಿದ್ದರು. ಇಲ್ಲಿ ತನಿಖಾಧಿಕಾರಿಗಳು ನೀರಾವರಿ ಇಲಾಖೆಗೆ ಸಂಬಂಧಿಸಿದ ಪ್ರಮುಖ‌ ದಾಖಲೆಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಹಾರ್ಡ್ ಡಿಸ್ಕ್, ಬ್ಯಾಂಕ್ ದಾಖಲೆ ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ಐಟಿ ಅಧಿಕಾರಿಗಳು ಮತ್ತೆ ರಾಹುಲ್ ಎಂಟರ್​​ ಪ್ರೈಸಸ್​ ಕಚೇರಿಗೆ ಆಗಮಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *