ಬೆಂಗಳೂರು: ಬೀದಿನಾಯಿಗಳ ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ನಗರದ ಶಶಿಧರ್ ಲೇಔಟ್​ನ ದ್ವಾರಕನಗರದಲ್ಲಿ ನಡೆದಿದೆ.

ಭಿಕ್ಷುಕಿ ವೃದ್ಧೆ ನಿನ್ನೆ ರಾತ್ರಿ 9:30ರ ಸುಮಾರಿಗೆ ಬೀದಿ ಬದಿಯಲ್ಲಿ ಮಲಗಿದ್ದ ವೇಳೆ 7-8 ಶ್ವಾನಗಳು ಅವರ ಮೇಲೆ ದಾಳಿ ಮಾಡಿದ್ದವು. ಈ ವೇಳೆ ಅಲ್ಲಿದ್ದ ಜನರು ಆ ನಾಯಿಗಳನ್ನ ಓಡಿಸಿ ವೃದ್ಧೆಯನ್ನ ರಕ್ಷಿಸಿದ್ರು. ಮತ್ತೆ ನಾಯಿಗಳು ರಾತ್ರಿ 11.30ರ ವೇಳೆಗೆ ವೃದ್ಧೆಯನ್ನ ಎಳೆದೊಯ್ದು ಭೀಕರವಾಗಿ ದಾಳಿ ಮಾಡಿ ಕಚ್ಚಿ ಕೊಂದಿವೆ ಎನ್ನಲಾಗಿದೆ.

ಲಾಕ್ಡೌನ್ ವೇಳೆ ಶ್ವಾನಗಳಿಗೆ ಊಟ ಸಿಗದ ಹಿನ್ನಲೆ, ಈ ರೀತಿ ಮನುಷ್ಯರ ಮೇಲೆ ಟಾರ್ಗೆಟ್ ಮಾಡ್ತಿವೆಯಾ ಎಂಬ ಪ್ರಶ್ನ ಮೂಡಿದೆ. ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ರಾಜರಾಜೇಶ್ವರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

The post ಬೆಂಗಳೂರಲ್ಲಿ ಶಾಕಿಂಗ್ ಘಟನೆ: ಮಲಗಿದ್ದ ಭಿಕ್ಷುಕಿ ವೃದ್ಧೆಯನ್ನ ಎಳೆದೊಯ್ದು ಕೊಂದ ಬೀದಿನಾಯಿಗಳು appeared first on News First Kannada.

Source: newsfirstlive.com

Source link