ಬೆಂಗಳೂರಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿಗೆ ಆಘಾತ; ಮೊಬೈಲ್ ಎಗರಿಸಿ ಖದೀಮರು ಪರಾರಿ


ಬೆಂಗಳೂರು: ಬೆಳ್ಳಂಬೆಳಗ್ಗೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿಗೆ ಶಾಕ್ ನೀಡಿರುವ ಕಳ್ಳರು, ಬೆಂಗಳೂರಿನಲ್ಲಿ ಕೈಯಿಂದ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.  ಇಂದು ಬೆಳಗಿನ ಜಾವ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶ್ರುತಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರ ಕೈಯಿಂದ ಕಳ್ಳರು ಮೊಬೈಲ್​ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸಾಮಾನ್ಯ ಏರಿಯಾ ಆಯ್ತು, ಇದೀಗ ಹೈಫೈ ಏರಿಯಾಗಳೇ ಕಳ್ಳರ ಟಾರ್ಗೆಟ್ ಆಗಿದ್ದು, ಡಾಲರ್ಸ್​ ಕಾಲೋನಿ, ಸದಾಶಿವನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.  ಈ ಹಿಂದೆ ಕೂಡ ಸದಾಶಿವ ನಗರದಲ್ಲಿ 3 ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಈ ಕಳ್ಳರ ಟಾರ್ಗೆಟ್​ ಯಾರ್​ ಗೊತ್ತಾ..?

ಮುಂಜಾನೆ ಹಾಗೂ ಸಂಜೆ ವೇಳೆ ವಾಕಿಂಗ್​ಗೆ​ ಬರುವವರೇ ಈ ಕಳ್ಳರ ಮೈನ್​ ಟಾರ್ಗೆಟ್​ ಆಗಿದ್ದಾರೆ. ಅದೇ ರೀತಿ ಶಾಸಕ ಪ್ರಿಯಾಂಕ್​ ಖರ್ಗೆ ಅವರ ಪತ್ನಿ ಶ್ರುತಿ ಖರ್ಗೆ ಮುಂಜಾನೆ 6:45ರ ಸುಮಾರಿಗೆ ವಾಕಿಂಗ್​ ಮಾಡುತ್ತಿದ್ದರು. ಈ ವೇಳೆ ಅವರ ಜೊತೆಗೆ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಶ್ರುತಿ ಖರ್ಗೆ ಅವರನ್ನು ಬೈಕ್​ ನಿಂದ ಫಾಲೋ ಮಾಡಿರುವ ಕಳ್ಳರು ಅವರ ಕೈಲಿದ್ದ ಐಪೋನ್​ 11 ಕಿತ್ತುಕೊಂಡು ಎಸ್ಕೇಪ್​ ಆಗಿದ್ದಾರೆ.

ಗುಲ್ಬರ್ಗದ ಚಿತ್ತಾಪುರ ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್​ ಖರ್ಗೆ ಪತ್ನಿಯ ಮೊಬೈಲ್​ ಪೋನ್​ ಕಳ್ಳತನವಾದ ಸಂಬಂಧ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಿಯಾಂಕ್​ ಖರ್ಗೆ ಪಿಎ ಪ್ರದೀಪ್​ ಪೋನ್​ ಕಳ್ಳತನದ ಕುರಿತು ದೂರು ನೀಡಿದ್ದಾರೆ. ಸದ್ಯ ಪೋನ್​ ಖದ್ದ ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ.

News First Live Kannada


Leave a Reply

Your email address will not be published.