ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡ್ತಿರೋ ಸಂಕಷ್ಟ ಒಂದೆಡೆಯಾದ್ರೆ, ಔಷಧಿ, ಬೆಡ್​​ಗಳ ಕೊರತೆ ಲಸಿಕೆ ಅಭಾವದ ಸಮಸ್ಯೆ ಮತ್ತೊಂದು ಕಡೆ. ಕಾಳಸಂತೆಯಲ್ಲಿ ರೆಮ್ಡೆಸಿವಿರ್​ ಚುಚ್ಚುಮದ್ದನ್ನ ದುಪ್ಪಟ್ಟು ಬೆಲೆಗೆ ಮಾರುತ್ತಿರೋ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಲೇ ಇವೆ. ಈಗ ಆಕ್ಸಿಮೀಟರ್​ ದಂಧೆ ಕೂಡ ಶುರುವಾಗಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ.

ವ್ಯಕ್ತಿಯ ಪಲ್ಸ್​ ರೇಟ್​ ಹಾಗೂ ಆಕ್ಸಿಜನ್ ಲೆವೆಲ್ ತಪಾಸಣೆ ಮಾಡಲು ಆಕ್ಸಿಮೀಟರ್ ಬಳಸಲಾಗುತ್ತದೆ. ಕೊರೊನಾ ಸೋಂಕಿಗೀಡಾದಾಗ ರೋಗಿಯ ಆಕ್ಸಿಜನ್ ಲೆವೆಲ್ ಎಷ್ಟಿದೆ ಅಂತ ನಿಯಮಿತವಾಗಿ ಚೆಕ್ ಮಾಡಲಾಗುತ್ತದೆ. ಮನೆಯಲ್ಲೇ ಚಿಕಿತ್ಸೆ ಪಡೆಯೋ ಸೋಂಕಿತರಿಗೆ ಆಕ್ಸಿಮೀಟರ್ ಅವಶ್ಯಕ. ಆದ್ರೀಗ ನಗರದಲ್ಲಿ ಏಕಾಏಕಿ ಆಕ್ಸಿಮೀಟರ್ ಕೊರತೆ ಎದುರಾಗಿದೆ.  ಮೆಡಿಕಲ್ ಸ್ಟೋರ್​ಗಳಲ್ಲಿ ಆಕ್ಸಿಮೀಟರ್​ ಸ್ಟಾಕ್ ಇಲ್ಲ.

ಹಾಗೇ ಬೇಡಿಕೆ ಹೆಚ್ಚಿರೋ ಕಾರಣ ಮೆಡಿಕಲ್ ಸ್ಟೋರ್​ಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗ್ತಿದೆ ಅಂತ ಆರೋಪಿಸಲಾಗಿದೆ. ಮೊದಲು 600 ರೂಪಾಯಿಗೆ ಆಕ್ಸಿಮೀಟರ್​ ಸಿಕ್ತಿತ್ತು.. ಈಗ 3 ರಿಂದ 4 ಸಾವಿರ ರೇಟ್​ ಹೇಳ್ತಿದ್ದಾರೆ ಅಂತ ಆರ್​ಜೆ ಕಿರಣ್ ಹೆಬ್ಬಾಲೆ ನ್ಯೂಸ್​​ಫಸ್ಟ್​​ ಜೊತೆಗೆ ಮಾತನಾಡುವಾಗ ತಿಳಿಸಿದ್ರು.

ಹೀಗಾಗಿ ಆಕ್ಸಿಮೀಟರ್​ನ ಕೃತಕ ಅಭಾವ ಸೃಷ್ಟಿಯಾಗ್ತಿದ್ಯಾ ಅನ್ನೋ ಅನುಮಾನ ಕೂಡ ಜನರಲ್ಲಿ ಮೂಡಿದೆ.

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಬೆಂಗಳೂರಲ್ಲಿ ಶುರುವಾಗಿದ್ಯಾ ಆಕ್ಸಿಮೀಟರ್ ದಂಧೆ? appeared first on News First Kannada.

Source: newsfirstlive.com

Source link