ಬೆಂಗಳೂರಲ್ಲಿ ಸೈಮಾ ಅವಾರ್ಡ್ಸ್​​ಗೆ ಕ್ಷಣಗಣನೆ​: ಯಶ್, ರಣವೀರ್, ಅಲ್ಲು ಅರ್ಜುನ್, ವಿಜಯ್, ಕಮಲ್ ಅತಿಥಿಗಳು | SIIMa 2022 Yash Allu arjun Here is the guest list for Bangalore SIIMA award


‘ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​’ ಇದು ಸೈಮಾದ ವಿಸ್ತಾರ ರೂಪ. ಇದು ಆರಂಭಗೊಂಡಿದ್ದು 2012ರಲ್ಲಿ. ಹೀಗಾಗಿ, ಸೈಮಾ ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ.

ಬೆಂಗಳೂರಲ್ಲಿ ಸೈಮಾ ಅವಾರ್ಡ್ಸ್​​ಗೆ ಕ್ಷಣಗಣನೆ​: ಯಶ್, ರಣವೀರ್, ಅಲ್ಲು ಅರ್ಜುನ್, ವಿಜಯ್, ಕಮಲ್ ಅತಿಥಿಗಳು

ಸೈಮಾ ಅತಿಥಿಗಳು

2022ನೇ ಸಾಲಿನ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ (SIIMA Awards)​ ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಂದು (ಸೆಪ್ಟೆಂಬರ್ 10) ಹಾಗೂ ನಾಳೆ (ಸೆಪ್ಟೆಂಬರ್ 11) ಬೆಂಗಳೂರಿನ ಪ್ಯಾಲೇಸ್ ​ಗ್ರೌಂಡ್​ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಅದ್ದೂರಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭ ಆಗಿದ್ದು, ಯಶ್ ಸೇರಿ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಕಳೆದ ವರ್ಷ ನಿಧನ ಹೊಂದಿದ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರಿಗೆ ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸಲ್ಲಿಕೆ ಮಾಡಲಾಗುತ್ತಿದೆ.

‘ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​’ ಇದು ಸೈಮಾದ ವಿಸ್ತಾರ ರೂಪ. ಇದು ಆರಂಭಗೊಂಡಿದ್ದು 2012ರಲ್ಲಿ. ಹೀಗಾಗಿ, ಸೈಮಾ ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಈ ಕಾರಣಕ್ಕೂ ಸೈಮಾ ಕಾರ್ಯಕ್ರಮ ವಿಶೇಷವಾಗಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಅಡಿಯಲ್ಲಿ ಬರುತ್ತವೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ-ನಟಿ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ವಿನ್ನರ್ ಯಾರು ಎಂಬುದು ಇಂದು ಘೋಷಣೆ ಆಗಲಿದೆ.

ಮೊದಲ ದಿನದ ಕಾರ್ಯಕ್ರಮದಲ್ಲಿ ಹಲವು ಸ್ಟಾರ್​ಗಳ ಸಮಾಗಮ ಆಗಲಿದೆ. ‘ಕೆಜಿಎಫ್ 2’ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಯಶ್ ಅವರು ಮುಖ್ಯ ಅತಿಥಿ ಆಗಿ ಬರುತ್ತಿದ್ದಾರೆ. ‘ಪುಷ್ಪ’ ಹೀರೋ ಅಲ್ಲು ಅರ್ಜುನ್ ಕೂಡ ಅತಿಥಿಗಳ ಸಾಲಿನಲ್ಲಿದ್ದಾರೆ. ವಿಜಯ್​ ದೇವರಕೊಂಡ, ತಮಿಳು ನಟ ಕಮಲ್ ಹಾಸನ್, ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಮೊದಲ ದಿನ ಅತಿಥಿಯಾಗಿ ಬರಲಿದ್ದಾರೆ ಎಂದು ಬಾಲಿವುಡ್ ಬಾಕ್ಸ್​ ಆಫೀಸ್​ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ.

TV9 Kannada


Leave a Reply

Your email address will not be published.