ಬೆಂಗಳೂರು: ನಗರದಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 15 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಕ್ರಿಟಿಕಲ್ ಪೇಷೆಂಟ್‌ಗಳೇ ಹೆಚ್ಚು. ಎರಡನೇ ಕೊರೊನಾ ಅಲೆಯಲ್ಲಿ ಸೋಂಕಿತರು ಹೆಚ್ಚಿನ ರಿಸ್ಕ್​​​ಗೆ ಒಳಗಾಗ್ತಿದ್ದಾರೆ ಅನ್ನೋದನ್ನ ಇದು ಸೂಚಿಸುತ್ತಿದೆ.

15 ದಿನದಲ್ಲೇ ಬರೋಬ್ಬರಿ 4,982 ಕ್ರಿಟಿಕಲ್ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. HDU, ICU, ICU-V ಗಳಿಗೆ‌ ಹೆಚ್ಚು ದಾಖಲಾಗ್ತಿದ್ದಾರೆ. ಮೇ 19ರಂದು ಒಂದೇ ದಿನ 453 ರೋಗಿಗಳು ಐಸಿಯುಗೆ ದಾಖಲಾಗಿದ್ದಾರೆ.

15 ದಿನದ ಕ್ರಿಟಿಕಲ್ ಪೇಷೆಂಟ್‌ಗಳ ಅಂಕಿ ಅಂಶಗಳು:

ಮೇ 7 – 302 ರೋಗಿಗಳು
ಮೇ 8 – 323 ರೋಗಿಗಳು
ಮೇ 9 – 242 ರೋಗಿಗಳು
ಮೇ 10 – 261 ರೋಗಿಗಳು
ಮೇ 11 – 290 ರೋಗಿಗಳು
ಮೇ 12 – 332 ರೋಗಿಗಳು
ಮೇ 13 – 372 ರೋಗಿಗಳು
ಮೇ 14 – 357 ರೋಗಿಗಳು
ಮೇ 15 – 351 ರೋಗಿಗಳು
ಮೇ 16 – 341 ರೋಗಿಗಳು
ಮೇ 17 – 286 ರೋಗಿಗಳು
ಮೇ 18 – 364 ರೋಗಿಗಳು
ಮೇ 19 – 453 ರೋಗಿಗಳು
ಮೇ 20 – 333 ರೋಗಿಗಳು
ಮೇ 21 – 375 ರೋಗಿಗಳು

ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರು ಹಾಗೂ ಕೊರೊನಾ ಸಿಂಪ್ಟಮ್ಸ್ ಇಲ್ಲದ ಸೋಂಕಿತರಿಗೂ ಸೂಕ್ತ ಚಿಕಿತ್ಸೆ ಅಗತ್ಯ. ರೋಗಲಕ್ಷಣವಿಲ್ಲ ಅಂತ ನಿರ್ಲಕ್ಷ್ಯ ಮಾಡಿದ್ರೆ ನಿಮ್ಮ ಲೈಫ್ ರಿಸ್ಕ್ ಆಗಲಿದೆ. ಹೀಗಾಗಿ ಆರಂಭದಲ್ಲೇ ಟ್ರಯಾಜ್‌ ಸೆಂಟರ್‌ಗೆ ಹೋಗಿ ಎಚ್ಚರ ವಹಿಸಬೇಕು ಎಂದು ಮನವಿ ಮಾಡಲಾಗಿದೆ. ಆದರಂತೆ ಆರೋಗ್ಯ ಇಲಾಖೆ ಕ್ರಿಟಿಕಲ್ ರೋಗಿಗಳ ಬಗ್ಗೆ ಹೆಚ್ಚು ಗಮನ ಹರಿಸ್ತಿದೆ.

The post ಬೆಂಗಳೂರಲ್ಲಿ ಹೆಚ್ಚಿದ ಕ್ರಿಟಿಕಲ್ ರೋಗಿಗಳ ಸಂಖ್ಯೆ.. 15 ದಿನದಲ್ಲಿ 4,982 ಪೇಷಂಟ್ಸ್​ ದಾಖಲು appeared first on News First Kannada.

Source: newsfirstlive.com

Source link