ಬೆಂಗಳೂರಲ್ಲಿ ಹೆಚ್ಚುತ್ತಲೇ ಇದೆ ಪಟಾಕಿ ಅವಘಡ; ಇಂದು ಬೆಳಗ್ಗೆ 6 ಜನರ ಕಣ್ಣಿಗೆ ಹಾನಿ


ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿ ಖುಷಿಯಲ್ಲಿ ಪಟಾಕಿ ಹೊಡೆದು ಆನಂದಿಸಲು ಹೋಗಿ ಅಘಾತ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಬೆಂಗಳೂರಲ್ಲಿ ಹೆಚ್ಚುತ್ತಿದೆ. ಇಂದು ಬೆಳಗ್ಗೆ ವೇಳೆಗೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಇಂದು ಪ್ರಕರಣಗಳು ದಾಖಲಾಗಿವೆ. ಪಟಾಕಿ ಸುಡುವ ವೇಳೆ ವೇಳೆ ಅವಗಢಗಳು ನಡೆಯುತ್ತಿದ್ದು, ಅದರಂತೆ ಮಧ್ಯರಾತ್ರಿ 2.30 ರ ಸುಮಾರಿಗೆ ಬಾಲಕನೋರ್ವ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇನ್ನು ನಾರಾಯಣ ನೇತ್ರಾಲಯದಲ್ಲಿ ಮತ್ತೆ 3 ಪ್ರಕರಣಗಳು ದಾಖಲಾಗಿವೆ. 30 ವರ್ಷದ ಮಹಿಳೆ, 11 ವರ್ಷದ‌ ಬಾಲಕ ಹಾಗು 8 ವರ್ಷದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡ ಮಹಿಳೆಯು ಬೆಳಗ್ಗೆ 8.15ರ ಸುಮಾರಿಗೆ ಆಸ್ಪತ್ರೆಗೆ ದಾಖಲಾದ್ರೆ, ಬಾಲಕ ಬೆಳಗ್ಗೆ 8.25 ರ ಸುಮಾರಿಗೆ ಕಣ್ಣಿನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇನ್ನು ಬಾಲಕಿ 9.20ರ ಸುಮಾರಿಗೆ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.

The post ಬೆಂಗಳೂರಲ್ಲಿ ಹೆಚ್ಚುತ್ತಲೇ ಇದೆ ಪಟಾಕಿ ಅವಘಡ; ಇಂದು ಬೆಳಗ್ಗೆ 6 ಜನರ ಕಣ್ಣಿಗೆ ಹಾನಿ appeared first on News First Kannada.

News First Live Kannada


Leave a Reply

Your email address will not be published.