ಬೆಂಗಳೂರಲ್ಲಿ ಹೊಸ ಶಕೆ.. ಡಿಜಿಟಲ್​ ಕರೆನ್ಸಿ ಪ್ರಪಂಚಕ್ಕೆ ಅಧಿಪತಿಯಾಗುತ್ತಾ ಸಿಲಿಕಾನ್ ಸಿಟಿ?


ಬೆಂಗಳೂರು: ಈಗ ಎಲ್ಲಿ ಕೇಳಿದರು ಅಲ್ಲಿ ಬಿಟ್ ಕಾಯಿನ್​..ಕ್ರಿಫ್ಟೋ ಕರೆನ್ಸಿ ಎಂಬ ಮಾತುಗಳದ್ದೆ ಸದ್ದು. ಸದ್ಯ ರಾಜ್ಯದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿರುವ ಬಿಟ್​ ಕಾಯಿನ್​ ಪ್ರಕರಣ ತನಿಖೆಯಲ್ಲಿದೆ. ಡಿಜಿಟಲ್​ ಕರೆನ್ಸಿ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಅಂತ್ರದಲ್ಲಿ ಸಿಲಿಕಾನ್​ ವ್ಯಾಲಿ ಬೆಂಗಳೂರಿಗೆ ಗುಡ್​ನ್ಯೂಸ್ ಸಿಕ್ಕಿದ್ದು​ ಈ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶಗಳು ಸಿಗುವ ಸಾಧ್ಯತೆಗಳಿವೆ.

ಹೌದು ಮುಂದಿನ ದಿನಗಳಲ್ಲಿ ಬೆಂಗಳೂರು ಕ್ರಿಪ್ಟೋ ಕರೆನ್ಸಿಯ ರಾಜಧಾನಿಯಾಗುತ್ತೆ ಎನ್ನಲಾಗಿದೆ. ಡಿಜಿಟಲ್​ ಕರೆನ್ಸಿ ಪ್ರಪಂಚದಲ್ಲಿ ಯುವಕರಿಂದ ಹೊಸ ಶಕೆ ಪ್ರಾರಂಭವಾಗುತ್ತಿದ್ದು ಸಿಲಿಕಾನ್​ ಸಿಟಿ ಈಗ ಕ್ರಿಪ್ಟೋ ಕ್ಯಾಪಿಟಲ್ ಆಗುವತ್ತ ದಾಪುಗಾಲಿಡುತ್ತಿದೆ. ಬೆಂಗಳೂರಿನಲ್ಲಿ ಹಲವಾರು ಕ್ರಿಪ್ಟೋ ಕಂಪನಿಗಳು ಶುರುವಾಗುತ್ತಿವೆ. ಈಗಾಗಲೇ 10ಕ್ಕೂ ಹೆಚ್ಚು ಬ್ಲಾಕ್​ಚೇನ್ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯ ಆರಂಭಿಸಿದ್ದು ಹೊಸ ಹೊಸ ಉದ್ಯೋಗವಕಾಶವನ್ನೂ ನೀಡುತ್ತಿವೆ.

ಇದನ್ನೂ ಓದಿ:ಕಲ್ಪನೆಗೂ ಮೀರಿದ ಬೆಳವಣಿಗೆ; ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಮೌಲ್ಯ ₹230 ಲಕ್ಷ ಕೋಟಿಗೆ ಏರಿಕೆ

ಕ್ರಿಪ್ಟೋ ಕರೆನ್ಸಿ ಮೈನಿಂಗ್​​ಗೆ ಬ್ಲಾಕ್​ಚೇನ್ ಟೆಕ್ನಾಲಜಿ ಬೆನ್ನೆಲಬಾಗಿದ್ದು Crypto Analyst, Risk Analyst, UX Blockchain Designer,Product Manager, Crypto Community Manager, Crypto Mining Architect, Blockchain Scientist, Front End Engineer ಹೀಗೆ ಉದ್ಯೋಗವಕಾಶಗಳನ್ನು ಆಧುನಿಕ ಹಣದ ಕಲ್ಪನೆ ತೆರೆದಿಟ್ಟಿದೆ. ಬೆಂಗಳೂರು ಮೂಲದ ಚಿಂಗಾರಿ ಌಪ್​ ಕಂಪನಿ ಕೂಡ GARI ಎಂಬ ಹೆಸರಿನಲ್ಲಿ ಕ್ರಿಫ್ಟೋ ಟೋಕನ್​ನ್ನು ಮಾರುಕಟ್ಟೆಗೆ ಬಿಟ್ಟಿದೆ.

ಸದ್ಯ ಎಲ್ಲರ ಚಿತ್ತ ಕಣ್ಣಿಗೆ ಕಾಣದ ಮಾಯಾಲೋಕದತ್ತ ನೆಟ್ಟಿದ್ದು ತಾ ಮುಂದು, ನಾ ಮುಂದು ಎಂದು ಪೈಪೋಟಿಗೆ ಬಿದ್ದಿವೆ. ಸರ್ಕಾರ ತ್ವರಿತವಾಗಿ ಎಚ್ಚೆತ್ತುಕೊಂಡು ಆದಷ್ಟು ಬೇಗ ಕ್ರಿಪ್ಟೋ ರೂಪುರೇಶೆಗಳನ್ನ ನಿರ್ಮಾಣ ಮಾಡಬೇಕೆಂದು ತಜ್ಞರು ಹೇಳಿದ್ದಾರೆ.

 

ಇದನ್ನೂ ಓದಿ:ಸಚಿವರ ತಲೆಗೆ ‘ಬಿಟ್​’ ಹುಳ: ಗಲಿಬಿಲಿಗೊಂಡಿರುವ ಮಿನಿಸ್ಟರ್ಸ್​ಗೆ ಕಾಡ್ತಿದ್ಯಂತೆ 6 ಗೊಂದಲ..!

ಇದನ್ನೂ ಓದಿ:ಬೊಮ್ಮಾಯಿ..ಸಿದ್ದರಾಮಯ್ಯ ಎಲ್ಲರ ಬಾಯಲ್ಲೂ ಬಿಟ್​​ಕಾಯಿನ್.. ಅಷ್ಟಕ್ಕೂ ಏನಿದು? ಇಲ್ಲಿದೆ ಡಿಟೇಲ್ಸ್​​

News First Live Kannada


Leave a Reply

Your email address will not be published. Required fields are marked *