ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಕೊರೊನಾ ಸೋಂಕಿತರಿಗಾಗಿ ಸಿದ್ಧಪಡಿಸಿರುವ ಐಸಿಯು ಆನ್ ವೀಲ್ಸ್ ಮತ್ತು ಆಕ್ಸಿಜನ್ ಆನ್ ವೀಲ್ಸ್ ಬಸ್ಸುಗಳು ಇಂದು ಲೋಕಾರ್ಪಣೆಗೊಂಡಿವೆ.

“ಸಾರಿಗೆ ಸುರಕ್ಷಾ” ಹೆಸರಿನಲ್ಲಿ ಸಂಚಾರಿ ಆಮ್ಲಜನಕ ಮತ್ತು ಐಸಿಯು ಸೇವೆ ನೀಡಲಾಗ್ತಿದೆ.  ಬಸ್ಸಿನೊಳಗೆ ಸೋಂಕಿತರಿಗೆ ಬೇಕಾಗುವ ಆಕ್ಸಿಜನ್ ಹಾಗೂ ಐಸಿಯು ಬೆಡ್​ ವ್ಯವಸ್ಥೆ ಇದೆ.

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಈ ಬಸ್ಸುಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಎಸ್.ಟಿ ಸೋಮಶೇಖರ್, ಶಾಸಕರಾದ ಚಂದ್ರಪ್ಪ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

The post ಬೆಂಗಳೂರಲ್ಲಿ ICU-ಆಕ್ಸಿಜನ್ ಆನ್ ವೀಲ್ಸ್​​ ಬಸ್ಸುಗಳಿಗೆ ಚಾಲನೆ appeared first on News First Kannada.

Source: newsfirstlive.com

Source link