ಬೆಂಗಳೂರು: ನಗರದಲ್ಲಿ 22 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್​ ಮಾಡಿ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಲ್ಲದೇ ಮರ್ಮಾಂಗಕ್ಕೆ ಮದ್ಯದ ಬಾಟಲ್​ ಇಟ್ಟು ವಿಕೃತ ಕಾಮಿಗಳು ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಮಮೂರ್ತಿ ನಗರದ ಎನ್​ಆರ್​ಐ ಲೇಔಟ್​ನಲ್ಲಿ ಕಳೆದ 10 ದಿನಗಳ ಹಿಂದೆ ಘಟನೆ ನಡೆದಿದೆ. ಕಾಮುಕರು ವಿಕೃತಿಮೆರೆದು ಚಿತ್ರೀಕರಿಸಿದ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ನಾಲ್ವರು ಯುವಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು ಸದ್ಯ ಆರೋಪಿಗಳ್ನ ಬಂಧಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಇಬ್ಬರು ಯುವತಿಯರು ನಾಲ್ವರು ಯುವಕರು ಇದ್ದರು.. ಪರಿಚಿತರಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಬಾಂಗ್ಲಾ ಮೂಲದ ಆರೋಪಿಗಳು ಹಾಗೂ ಹಕೀಲ್ ಹೆಸರಿನ ಹೈದರಾಬಾದ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಮತ್ತಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಕಳೆದ 6 ದಿನಗಳ ಹಿಂದೆ ಈ ವಿಡಿಯೋ ಬಾಂಗ್ಲಾದೇಶದಲ್ಲಿ ವೈರಲ್ ಆಗಿದ್ದು ಅಲ್ಲಿ ಭಾರೀ ಚರ್ಚೆಯಾದ ಬಳಿಕ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ವಿಡಿಯೋ ಅಪ್ಲೋಡ್ ಮೂಲ ಹುಡುಕಾಡಿದಾಗ ಬಾಂಗ್ಲಾ ಪೊಲೀಸ್ರಿಗೆ ವಿಡಿಯೋ ಅಪ್ಲೋಡ್ ಆಗಿರೋದು ಇಂಡಿಯಾದಿಂದ ಎಂಬುದು ಪತ್ತೆಯಾಗಿದೆ. ಅವರಿಂದ ಅಸ್ಸಾಂ ಪೊಲೀಸ್ರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು ಅಸ್ಸಾಂ ಪೊಲೀಸರು ಟವರ್ ಡಂಪ್ ಪತ್ತೆ ಮಾಡಿದ ಬಳಿಕ ಬೆಂಗಳೂರು ಅಂತಾ ಪತ್ತೆಯಾಗಿದೆ.

ಅಸ್ಸಾಂ ಪೊಲೀಸರು ಕಮಿಷನರ್ ಕಮಲ್ ಪಂತ್​ಗೆ ಈ ಕುರಿತು ಮಾಹಿತಿ ನೀಡಿದ್ದಾರೆ.ಕಮಿಷನರ್ ಕೇಸ್​ನ್ನು ಆನಂತರ ಕೇಸ್ ಸಂದೀಪ್ ಪಾಟೀಲ್​ಗೆ ನೀಡಿದ್ದಾರೆ. ಆಗ ಎಸಿಪಿ ಗೌತಮ್ ನೇತೃತ್ವದ ಟೀಂ ರೆಡಿಯಾಗಿದೆ. ಆರೋಪಿಗಳನ್ನು ಹುಡುಕಿಕೊಂಡು ಹೋದ ವೇಳೆ ಬಿಲ್ಡಿಂಗ್​ ನೆಗೆದು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆಗ ಕ್ರೈಂ ಪಿಸಿ ಶಶಿ ಕಟ್ಟಡದಿಂದ ಜಿಗಿದು ಪ್ರಮುಖ ಆರೋಪಿಗೆ ಕೋಳ ಹಾಕಿದ್ದಾರೆ. ಆನಂತರ ಮನೆ ಡೋರ್ ಹೊಡೆದು ಉಳಿದ ಆರೋಪಿಗಳನ್ನ ಸೆರೆಹಿಡಿದಿದ್ದಾರೆ ಎನ್ನಲಾಗಿದೆ.

ಇನ್ನೂ ಘಟನೆಗೆ ಕಾರಣ ಪ್ರಮುಖ ಆರೋಪಿ ರಿದಾಯ್ ಎನ್ನಲಾಗಿದ್ದು ಈತ ಬಾಂಗ್ಲಾ ಯುವತಿಯರನ್ನ ಕರೆಸಿ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಆತನಿಗೂ ಸಂತ್ರಸ್ಥೆಗೂ ಕಿರಿಕಿರಿಯಾಗಿದ್ದು ಇದರಿಂದ ಸೇಡು ತೀರಿಸಿಕೊಳ್ಳಲು ಸ್ನೇಹಿತರ ಕರೆಯಿಸಿ ವಿವಸ್ತ್ರಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.

The post ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ: ಗ್ಯಾಂಗ್ ರೇಪ್ ಮಾಡಿ ವಿಕೃತಿ ಮೆರೆದ ಕಾಮುಕರು appeared first on News First Kannada.

Source: newsfirstlive.com

Source link