ಬೆಂಗಳೂರು: ನಾಳೆಯಿಂದ ಇಂದಿರಾ ಕ್ಯಾಂಟೀನ್​ನಲ್ಲಿ ದಿನದ ಮೂರು ಹೊತ್ತೂ ಫ್ರೀ ಊಟ ಪೂರೈಸುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.

ಬಡ ವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ಆಹಾರ ಪೊಟ್ಟಣಗಳ ಮೂಲಕ ಊಟ ಪೂರೈಕೆ ಮಾಡಲಾಗುವುದು. ನಾಳೆಯಿಂದ ಮೇ 24ರವರೆಗೆ ಮೂರೂ ಹೊತ್ತು ಆಹಾರ ಪೂರೈಕೆಯಾಗಲಿದೆ. ಗುರುತಿನ ಚೀಟಿ ತೋರಿಸಿ ಜನರು ಉಚಿತ ಊಟ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಒಬ್ಬ ಫಲಾನುಭವಿಗೆ ಗರಿಷ್ಠ 3 ಪೊಟ್ಟಣಗಳನ್ನ ನೀಡಲು ನಿರ್ಧಾರ ಮಾಡಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಆಹಾರ ಪಡೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆದೇಶ ನೀಡಿದ್ದಾರೆ.

The post ಬೆಂಗಳೂರಿಗರಿಗೂ ಚಿಂತೆ ಬೇಡ; ನಾಳೆಯಿಂದ ಇಂದಿರಾ ಕ್ಯಾಂಟೀನ್​ನಲ್ಲಿ 3 ಹೊತ್ತು ಊಟ ಫ್ರೀ appeared first on News First Kannada.

Source: newsfirstlive.com

Source link