ಬೆಂಗಳೂರು: ರಾಜ್ಯದಲ್ಲೂ ಲಾಕ್​ಡೌನ್ ಪರಿಣಾಮ ಬೀರಿದ್ದು, ಪಾಸಿಟಿವಿಟಿ ರೇಟ್​ ಶೇಕಡಾ 14.95%ಗೆ ಇಳಿಕೆಯಾಗಿದೆ ಅಂತಾ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಸುಧಾಕರ್​​.. ರಾಜ್ಯದಲ್ಲಿ ಇಂದು 42,444 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅದರಲ್ಲಿ ಬೆಂಗಳೂರಲ್ಲೇ ಅತೀ ಹೆಚ್ಚು ಮಂದಿ ಅಂದ್ರೆ 21,126 ರೋಗಿಗಳು ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು ಇಂದು ಒಟ್ಟು 1,37,894 ಮಂದಿಯನ್ನ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ 20,628 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ 14.95ಕ್ಕೆ ಬಂದು ನಿಂತಿದೆ. ಹಾಗೇ ಬೆಂಗಳೂರಲ್ಲಿ ಇಂದು 54,448 ಮಂದಿಯನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 4,889 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಬೆಂಗಳೂರಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ 8.97ಕ್ಕೆ ಬಂದು ನಿಂತಿದೆ ಎಂದು ತಿಳಿಸಿದ್ದಾರೆ.

The post ಬೆಂಗಳೂರಿಗರಿಗೆ ಗುಡ್​ ನ್ಯೂಸ್​.. ಕೊರೊನಾ ಪಾಸಿಟಿವಿಟಿ ರೇಟ್​​​ 8.97%ಗೆ ಇಳಿಕೆ appeared first on News First Kannada.

Source: newsfirstlive.com

Source link