ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರದ್ದು ನಂಬರ್ 1 ಸ್ಥಾನ.. ಬೆಂಗಳೂರಿನ ಜನಸಂಖ್ಯೆ ಇದಕ್ಕೆ ಪ್ರಮುಖ ಕಾರಣ ಎಂದೇ ಹೇಳಬಹುದು.

ಆದ್ರೆ ಇಂದಿನ ರಾಜ್ಯ ಆರೋಗ್ಯ ಸಚಿವಾಲಯದ ಪ್ರಕಾರ ಬೆಂಗಳೂರಿನ ಸೋಂಕು ಪ್ರಕರಣಗಳು ಮತ್ತು ಗುಣಮುಖರ ಅಂಕಿ ಅಂಶ ಅಚ್ಚರಿ ಮೂಡಿಸುವಂತಿದೆ. ಹೌದು, ಬೆಂಗಳೂರಿನಲ್ಲಿ ಇಂದು ಕೇವಲ 8,676 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಮತ್ತೊಂದಯ ಖುಷಿಯ ವಿಚಾರವೆಂದರೆ ಇಂದು ಬೆಂಗಳೂರು ನಗರವೊಂದ್ರಲ್ಲೇ 31,795 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆಯ ಅಂಕಿ-ಅಂಶಗಳಿಗೆ ಹೋಲಿಸಿದರೆ ಬೆಂಗಳೂರಿನ ಇಂದಿನ ಸೋಂಕಿತರ ಅಂಕಿ-ಅಂಶದ ನಡುವೆ ಭಾರೀ ವ್ಯತ್ಯಾಸವೇ ಕಂಡುಬಂದಿದೆ.

ನಿನ್ನೆ
ಪಾಸಿಟಿವ್ ಸಂಖ್ಯೆ 13,338
ಡಿಸ್ಚಾರ್ಜ್ ಆದವರ ಸಂಖ್ಯೆ- 10,097
ಇಂದು
ಪಾಸಿಟಿವ್ ಸಂಖ್ಯೆ- 8,676
ಡಿಸ್ಚಾರ್ಜ್ ಆದವರು- 31,795

The post ಬೆಂಗಳೂರಿಗೂ ಬಂಪರ್: ಒಂದೇ ದಿನ 31,795 ಮಂದಿ ಡಿಸ್ಚಾರ್ಜ್, ಪಾಸಿಟಿವ್ ಕೇಸ್ 8,676 appeared first on News First Kannada.

Source: newsfirstlive.com

Source link