ಬೆಂಗಳೂರಿಗೆ ಒಮಿಕ್ರಾನ್​​​​ ಹೊತ್ತು ತಂದ ವ್ಯಕ್ತಿಗಳು ಯಾರು? ಯಾವ ದೇಶದಿಂದ ಬಂದ್ರು?


ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಎರಡು ಒಮಿಕ್ರಾನ್​ ವೈರಸ್​ ಪತ್ತೆ ಆಗಿದೆ. 66 ವರ್ಷದ ವೃದ್ಧನಲ್ಲಿ ಒಮಿಕ್ರಾನ್​ ವೈರಸ್​ ಪತ್ತೆಯಾಗಿದೆ. 20ರಂದು ಸೌತ್​ ಆಫ್ರಿಕಾದಿಂದ ಬಂದಿದ್ದ ವೃದ್ಧನ ಸ್ಯಾಂಪಲ್ ಏರ್​ಪೋರ್ಟ್​ನಲ್ಲಿ ತೆಗೆದುಕೊಳ್ಳಲಾಯ್ತು. ಪಾಸಿಟಿವ್​ ಬಂತು, ತಕ್ಷಣ ಜಿನೋಮ್​ ಸೀಕ್ವೆನ್ಸ್​ ರವಾನೆ ಮಾಡಿದೆವು. ಜಿನೋಮ್​ ಸೀಕ್ವೆನ್ಸ್​ನಲ್ಲಿ ಒಮಿಕ್ರಾನ್​ ಅನ್ನೋದು ದೃಢ ಆಗಿತ್ತು ಎಂದು ಬಿಬಿಎಂಪಿ ಆಯುಕ್ತ ಗೌರವ್​​ ಗುಪ್ತಾ ಹೇಳಿದರು.

ಈ ಸಂಬಂಧ ಮಾತಾಡಿದ ಗೌರವ್​ ಗುಪ್ತಾ, ಹೋಟೆಲ್​ನಲ್ಲಿ ಅವರನ್ನ ಐಸೊಲೇಟ್​ ಮಾಡಲಾಗಿತ್ತು. 24 ಪ್ರಾಥಮಿಕ ಸಂಪರ್ಕಿತರು, 240 ಸೆಕೆಂಡರಿ ಕಾಂಟ್ಯಾಕ್ಟ್​ ಪತ್ತೆಯಾಗಿದೆ. ಎಲ್ಲರ ಸ್ಯಾಂಪಲ್​ ಪಡೆದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಳಿಸಿದ್ದೇವೆ. ಸಂಪರ್ಕದಲ್ಲಿದ್ದವರಿದ್ದೆಲ್ಲಾ ನೆಗೆಟಿವ್​ ರಿಪೋರ್ಟ್ ಬಂದಿದೆ. ಆ ವ್ಯಕ್ತಿಗೆ ಇನ್ನೊಂದು ಲ್ಯಾಬ್​ನಲ್ಲಿ ಟೆಸ್ಟ್​ ಮಾಡಿಸಲಾಗಿದೆ. ಅವರ ಸ್ಯಾಂಪಲ್ ಟೆಸ್ಟ್​ನಲ್ಲಿ ನೆಗೆಟಿವ್​ ರಿಪೋರ್ಟ್​ ಬಂದಿದೆ. 27ರಂದು ಆ ವ್ಯಕ್ತಿ ಏರ್​ಪೋರ್ಟ್ ಮೂಲಕ ದುಬೈಗೆ ಹೋಗಿದ್ದಾರೆ ಎಂದರು.

ಎರಡನೇ ಸೋಂಕಿತ 46 ವರ್ಷದ ವ್ಯಕ್ತಿ. 22ರಂದು ಸ್ಯಾಂಪಲ್​ ಪಡೆದಿದ್ದು, ಪಾಸಿಟಿವ್​ ಬಂದಿತ್ತು. ಬಳಿಕ ಸ್ಯಾಂಪಲ್​ ಅನ್ನ ಎನ್​ಸಿಬಿಎಸ್​ ಲ್ಯಾಬ್​ಗೆ ರವಾನೆ ಮಾಡಲಾಗಿತ್ತು. ಇವತ್ತು ಆ ವ್ಯಕ್ತಿಯಲ್ಲೂ ಒಮಿಕ್ರಾನ್​ ಪಾಸಿಟಿವ್​ ಬಂದಿದೆ. ಆ ವ್ಯಕ್ತಿಯನ್ನೂ ಹೋಮ್​ ಐಸೊಲೇಷನ್​ನಲ್ಲಿರಸಲಾಗಿತ್ತು. ಬಳಿಕ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. 13 ಪ್ರಾಥಮಿಕ ಸಂಪರ್ಕಿತರು, 205 ಸೆಕೆಂಡರಿ ಕಾಂಟ್ಯಾಕ್ಟ್​ ಪತ್ತೆಯಾಗಿವೆ ಎಂದು ತಿಳಿಸಿದರು.

 

 

News First Live Kannada


Leave a Reply

Your email address will not be published. Required fields are marked *