ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿಗೆ ಅಕ್ಷರಶಃ ಕೊರೊನಾ ಸುನಾಮಿಯೇ ಬಂದಪ್ಪಳಿಸಿದಂತಾಗಿದೆ. ದಿನವೊಂದಕ್ಕೆ 20 ಸಾವಿರಕ್ಕೂ ಮೀರಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರಿನ ಚಿತಾಗಾರಗಳು ತುಂಬಿಹೋಗಿವೆ.. ಆ್ಯಂಬುಲೆನ್ಸ್​​ಗಳಲ್ಲಿ ತಮ್ಮ ಸಂಬಂಧಿಕರ ಮೃತದೇಹಗಳನ್ನ ಇಟ್ಟುಕೊಂಡು ಅಂತ್ಯಸಂಸ್ಕಾರಕ್ಕಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಇಂಥ ದುರಿತ ಸಮಯದಲ್ಲೂ ಗಿಡ್ಡೇನಹಳ್ಳಿ ಚಿತಾಗಾರದ ಬಳಿ ಬಿಜೆಪಿ ರಾಜಕಾರಣಿಗಳು ಪ್ರಚಾರಕ್ಕಿಳಿದಿದ್ದಾರೆ. ಗಿಡ್ಡೇನಹಳ್ಳಿ ಚಿತಾಗಾರದ ಸಮೀಪ ಬ್ಯಾನರ್​ ಹಾಕಿಕೊಂಡಿರುವ ಬಿಜೆಪಿ ನಾಯಕರು.. ತಮ್ಮವರನ್ನ ಕಳೆದುಕೊಂಡು ನೋವಿನಲ್ಲಿರುವ ಸಂಬಂಧಿಕರಿಗೆ ಉಚಿತ ಟೀ, ಕಾಫಿ, ತಿಂಡಿ ನೀಡುವ ಬಗ್ಗೆ ಪ್ರಚಾರ ಪಡೆಯುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲೂ ಈ ಬ್ಯಾನರ್​ ವೈರಲ್ ಆಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮವರನ್ನ ಕಳೆದುಕೊಂಡು ನೋವಿನಲ್ಲಿರುವ ಸಂಬಂಧಿಕರಿಗೆ ನಿಮ್ಮ ಉಚಿತ ಟೀ ಕಾಫಿ ತಿಂಡಿ ಬೇಕಾಗಿಲ್ಲ. ಇದರ ಬದಲಿಗೆ ಆಸ್ಪತ್ರೆಗಳ ಮುಂದೆ ಬ್ಯಾನರ್​ ಹಾಕಿ ಉಚಿತ ಬೆಡ್ ಮತ್ತು ಆಕ್ಸಿಜನ್ ನೀಡುತ್ತೇವೆ ಅಂತಾ ಹೇಳಿ.. ಅದು ನಿಜವಾದ ರಾಜಕೀಯ, ಸಮಾಜ ಸೇವೆ ಎಂದು ಕಿಡಿಕಾರಿದ್ದಾರೆ. ಇದರಿಂದ ಕೊನೆಗೂ ಎಚ್ಚೆತ್ತ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಬೆಂಬಲಿಗರು ಕೊನೆಗೂ ಪೋಸ್ಟರ್​ಗಳನ್ನ ತೆಗೆದು ಹಾಕಿದ್ದಾರೆ.

The post ಬೆಂಗಳೂರಿಗೆ ಕೊರೊನಾ ಸುನಾಮಿ: ಸ್ಮಶಾನಕ್ಕೆ ದಾರಿ ತೋರಿಸಿದ ಬಿಜೆಪಿ appeared first on News First Kannada.

Source: newsfirstlive.com

Source link