ಬೆಂಗಳೂರು: ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದಂತೆ ಸೋಂಕಿತರಿಗೆ ಆಮ್ಲಜನಕದ ಕೊರತೆ ಹೆಚ್ಚಾಗಿದ್ದು, ಬೆಡ್‍ಗಳಿಲ್ಲದೇ ಆರೋಗ್ಯ ಕೇಂದ್ರಗಳ ಎದುರೇ ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಮಸ್ಯೆಗಳಿಗೆ ತೀಲಾಂಜಲಿ ಹಾಡಲು ಮುಂದಾಗಿರುವ ರಾಜ್ಯ ಸರ್ಕಾರ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಇಂದು ಉದ್ಘಾಟನೆ ಮಾಡಿದ್ದಾರೆ.

ದೇಶದಲ್ಲಿ ಮೊದಲು ತಮಿಳುನಾಡು ಸರ್ಕಾರ ಆಕ್ಸಿಜನ್ ಬಸ್ ಸೇವೆಯನ್ನು ಆರಂಭ ಮಾಡಿ ಗಮನ ಸೆಳೆದಿತ್ತು. ಸದ್ಯ ರಾಜ್ಯ ಸರ್ಕಾರವೂ ಇದನ್ನು ಅನುಸರಿಸಿ ನಗರದಲ್ಲಿ ಅನುಷ್ಠಾನಗೊಳಿಸಿದೆ. ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ತುರ್ತು ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಬಸ್ ಸೇವೆ ಚಾಲನೆ ನೀಡಲಾಗಿದೆ. ಪ್ರತಿಯೊಂದು ಆಕ್ಸಿಜನ್ ಬಸ್ ಒಮ್ಮೆಗೆ 8 ಸೋಂಕಿತರಿಗೆ ಆಕ್ಸಿಜನ್ ಸೇವೆ ಲಭ್ಯವಾಗಲಿದೆ. ಇಂತಹ 20 ಯೂನಿಟ್‍ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​​ಗಳ ಬಳಿ ನಿಯೋಜನೆ ಮಾಡಲಾಗುವುದು ರಾಜ್ಯದಾದ್ಯಂತ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಆಕ್ಸಿಜನ್ ಕೊರತೆ ಎದುರಿಸುತ್ತಿರುವ ಸೋಂಕಿತರಿಗೆ ಬಸ್ ತಾತ್ಕಾಲಿಕ ರಿಲೀಫ್ ನೀಡಲಿದೆ. ಬಸ್‍ನಲ್ಲಿ ಆಕ್ಸಿಜನ್ ಸಿಲಿಂಡರ್, ಅಗತ್ಯ ವೈದ್ಯಕೀಯ ಉಪಕರಣ, ಫೇಸ್‍ಶೀಲ್ಡ್ ವ್ಯವಸ್ಥೆಗಳನ್ನು ನೀಡಲಾಗಿದೆ. ಬಸ್‍ಅನ್ನು ಆಕ್ಸಿಜನ್ ಕೇಂದ್ರವಾಗಿ ಪರಿವರ್ತಿಸಿ ಆಕ್ಸಿಜನ್ ಬಸ್ ಎಂದು ಹೆಸರಿಡಲಾಗಿದೆ. ಸದ್ಯ ಬಿಬಿಎಂಪಿ ಅಧಿಕಾರಿಗಳು ಸೇವೆಯನ್ನು ಹೇಗೆ ಜನರಿಗೆ ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.

The post ಬೆಂಗಳೂರಿಗೆ ಬಂತು ಆಕ್ಸಿಜನ್ ಬಸ್; ಏನಿದರ ವಿಶೇಷತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ appeared first on News First Kannada.

Source: newsfirstlive.com

Source link