ಬೆಂಗಳೂರಿನಲ್ಲಿರುವ ಮುಸ್ಲಿಂ ಹೆಸರಿನ ರಸ್ತೆಗಳ ಮರು ನಾಮಕರಣಕ್ಕೆ ಬಿಜೆಪಿ ಸಿದ್ಧತೆ | BJP Plans to re name muslim named streets and parks in bengaluru


ಬೆಂಗಳೂರಿನಲ್ಲಿರುವ ಮುಸ್ಲಿಂ ಹೆಸರಿನ ರಸ್ತೆಗಳ ಮರು ನಾಮಕರಣಕ್ಕೆ ಬಿಜೆಪಿ ಸಿದ್ಧತೆ

ಬಿಜೆಪಿ

ರಾಜ್ಯದಲ್ಲಿ ಹಿಜಾಬ್, ದೇವಸ್ಥಾನಗಳ ಬಳಿ ಹಿಂದೂಯೇತರ ವ್ಯಾಪಾರಕ್ಕೆ ನಿರ್ಬಂಧ, ಹಲಾಲ್ ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಹಿಂದೂ ಮುಸ್ಲಿಮರ ನಡುವೆ ಸಂಘರ್ಷ ಉಂಟಾಗ್ತಾನೆ ಇದೆ. ಈಗ ಬೆಂಗಳೂರಿನಲ್ಲಿ ಹೊಸ ವಿವಾದ ಶುರುವಾಗ್ತಿದೆ ಬೆಂಗಳೂರಿನಲ್ಲಿರೋ ರಸ್ತೆ, ಏರಿಯಾ, ಪಾರ್ಕ್ಗಳಿಗೆ ಇರುವ ಮುಸ್ಲಿಮರ ಹೆಸರನ್ನ ಬದಲಾಯಿಸಲು ಸಿದ್ಧತೆ ಶುರುವಾಗಿದೆ. ಬೆಂಗಳೂರಿನಲ್ಲಿರುವ ಮುಸ್ಲಿಮರ ಹೆಸರಿನ ರಸ್ತೆಗಳಿಗೆ ಮರು ನಾಮಕರಣ? ಮಾಡಲು ಚಿಂತನೆ ನಡೆದಿದೆ.

ಬೆಂಗಳೂರಿನಲ್ಲಿರುವ ಟಿಪ್ಪು ರಸ್ತೆ, ಮಸೀದಿ ರೋಡ್ ಹೀಗೆ ನಾನಾ ಹೆಸರಿನ ರಸ್ತೆಗಳಿಗೆ ಹಿಂದೂ ದೇವರ ಅಥವಾ ಬೇರೆ ಹೆಸರಿಡಲು ಬೆಂಗಳೂರಿನ ಬಿಜೆಪಿ ಶಾಸಕರು ಹಾಗೂ ಜನ ಪ್ರತಿನಿಧಿಗಳು ತಯಾರಿ ನಡೆಸಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಕೆಲ ಪಾರ್ಕ್, ರಸ್ತೆ, ಸರ್ಕಲ್, ಬೀದಿಗಳಿಗೆ ಮುಸ್ಲಿಂ ಹೆಸರು ನಾಮಕರಣ ಮಾಡಲಾಗಿತ್ತು. ಈಗ ಅದನ್ನ ಬದಲಾಯಿಸಿ ಹಿಂದೂ ದೇವರ ಅಥವಾ ಬೇರೆ ಹೆಸರಿಡಲು ತಯಾರಿ ನಡೆದಿದೆ. ಹೀಗಾಗಿ ಬಿಜೆಪಿ ನಾಯಕರು ವಲಯವಾರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಆತಂರಿಕವಾಗಿ ಮಾಹಿತಿ ರವಾನಿಸಲಾಗಿದ್ದು ಶೀಘ್ರದಲ್ಲೇ ಬಿಜೆಪಿ ನಾಯಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಮುಖ್ಯ ಹಾಗೂ ಅಡ್ಡ ರಸ್ತೆಗಳು ಸೇರಿ ಅಂದಾಜು ಒಂದು ಸಾವಿರ ರಸ್ತೆಗಳಿಗೆ ಮರುನಾಮಕರಣಕ್ಕೆ‌ ಸಿದ್ಧತೆ ನಡೆದಿದೆ. ಟಿಪ್ಪು ಸುಲ್ತಾನ್ ಪ್ಯಾಲೇಸ್ ರೋಡ್, (ಮೆಕ್ರಿ ಸರ್ಕಲ್)ಇನಾಯುತೂಲ್ಲಾ ಮೇಕ್ರಿ, ಅಂಜನಾಪುರ ಮುಖ್ಯರಸ್ತೆಯಲ್ಲಿರೋ ಟಿಪ್ಪು ಸರ್ಕಲ್, ವಿದ್ಯಾರಣ್ಯಪುರದ ಮೊಹಮ್ಮದ್ ಸಾಬ್ ಪಾಳ್ಯ, ಜಾಮೀಯಾ‌ ಮಸೀದಿ ರೋಡ್, ಮುಬಾರಕ್ ರೋಡ್, ಶಾಂತಿನಗರದ ಬಿಲಾಲ್ ನಗರ, ಆರ್ ಟಿ ನಗರದ ಸುಲ್ತಾನ್ ಪಾಳ್ಯ, ಬನಶಂಕರಿ ಯಾಬರ್ ನಗರ, ಗುರಪ್ಪನಪಾಳ್ಯ ಬಿಸ್ಮಿಲ್ಲಾ ನಗರ, ಇಲಿಯಾಸ್ ನಗರ, ಕುಮಾರಸ್ವಾಮಿ ಲೇಔಟ್, ಮೈಸೂರು ರಸ್ತೆಯ ಟಿಪ್ಪು ನಗರ ಹೀಗೆ ನಾನಾ ಹೆಸರಿರುವ ರಸ್ತೆಗಳಿಗೆ ಮರು ನಾಮಕರಣ ಮಾಡಲು ತಯಾರಿ ನಡೆದಿದೆ.

ಹಿಂದೆ ಪಾದರಾಯನಪುರದಲ್ಲಿ ರಸ್ತೆಗಳಿಗೆ ಕುಟುಂಬದ ಹೆಸರಿಡಲು ಕಾರ್ಪೋರೇಟರ್ ಮುಂದಾಗಿದ್ದರು. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈಗ ಇದೇ ಮಾದರಿಯಲ್ಲಿ ಮರುನಾಮಕರಣ ವಾರ್ ಶುರುವಾಗಿದೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ರಸ್ತೆಗಳಿಗೆ ಹೆಸರಿಡಲು ಬಿಜೆಪಿ ಹೊರಟಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ಸಾಥ್ ನೀಡುತ್ತಿವೆ.

TV9 Kannada


Leave a Reply

Your email address will not be published. Required fields are marked *