ಬೆಂಗಳೂರಿನಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟ: ಇಬ್ಬರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ | Cooking gas cylinder explosion in Bangalore: Two seriously injured, one in critical condition


ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಬಿಹಾರ ಮೂಲದ ಗೌತಮ್​, ಮಂಡಿಲ್, ಮಹಿಳೆ ಸೋನಿ ಎಂಬುವರಿಗೆ ಗಾಯವಾಗಿದೆ.

ಬೆಂಗಳೂರಿನಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟ: ಇಬ್ಬರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ

ಸಿಲಿಂಡರ್ ಸ್ಪೋಟ (ಸಂಗ್ರಹ ಚಿತ್ರ)

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 03, 2022 | 10:37 AM
ಬೆಂಗಳೂರು: ಅಡುಗೆ ಗ್ಯಾಸ್ ಸಿಲಿಂಡರ್​ ಲೀಕ್ ಆಗಿ ಸ್ಪೋಟಗೊಂಡು ಇಬ್ಬರಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವಂತಹ ಘಟನೆ ಕೆಎಸ್ ಲೇಔಟ್ ಠಾಣಾ ವ್ಯಾಪ್ತಿಯ ಯಲಚೇನಹಳ್ಳಿ ಬಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಬಿಹಾರ ಮೂಲದ ಗೌತಮ್​, ಮಂಡಿಲ್, ಮಹಿಳೆ ಸೋನಿ ಎಂಬುವರಿಗೆ ಗಾಯವಾಗಿದೆ. ಇಬ್ಬರು ಸೆಕ್ಯೂರಿಟಿ ಕೆಲಸ ಮಾಡ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಎಸ್ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದರು.

ವಿಜಯನಗರ: ಬೈಕ್​ ಅಡ್ಡಗಟ್ಟು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಗಳೂರು ತಾಲೂಕಿನ ಬಿಳಿಚೋಡು ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಮಂಜುನಾಥ್​(32), ಮನೋಜ್​(40) ಬಂಧಿತ ಆರೋಪಿಗಳು. ಬಂಧಿತ ಇಬ್ಬರು ಆರೋಪಿಗಳಿಂದ 50 ಗ್ರಾಂ ಚಿನ್ನಾಭರಣ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಕೂಡ್ಲಗಿ ತಾಲೂಕಿನ ರಮೇಶ್-ಸುಷ್ಮಾ ದಂಪತಿ ಬೈಕ್​​ನಲ್ಲಿ‌ ಹೋಗುತ್ತಿದ್ದಾಗ ಆರೋಪಿಗಳು ಚಿನ್ನ ದೋಚಿದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.