
ಉದ್ಯಮಿ ಮಗ, ಚಿನ್ನಾಭರಣ ಕದ್ದು ಪರಾರಿಯಾಗುತ್ತಿರುವ ದೃಶ್ಯ
ಆರು ವರ್ಷದ ಬಾಲಕನನ್ನು ಕರೆದು ಚಿನ್ನ ಕದ್ದು ಇಬ್ಬರು ಬೈಕ್ನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ರಾಘವೇಂದ್ರ ಸದ್ಯ ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಕಣ್ಣಾಮುಚ್ಚಾಲೆ ಆಟ ಆಡೋಣ ಎಂದು ಕರೆದು ಪುಸಲಾಯಿಸಿ ಬಾಲಕ (Boy) ಬಳಿಯಿದ್ದ ಚಿನ್ನಾಭರಣವನ್ನು (Jewellery) ಕದ್ದು ಪರಾರಿಯಾಗಿರುವ ಘಟನೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ರಾಘವೇಂದ್ರ ಎಂಬುವವರು ಕುಟುಂಬ ಸಮೇತರಾಗಿ ಮಾಗಡಿ ರಸ್ತೆಯ ಸರಸ್ವತಿ ಕನ್ವೆನ್ಶನ್ ಹಾಲ್ ಬಳಿ ಸಂಬಂಧಿಯ ಮದುವೆಗೆಂದು ಬಂದಿದ್ದರು. ಈ ವೇಳೆ ಖದೀಮರು ಉದ್ಯಮಿ ಮಗನ ಮೈ ಮೇಲಿದ್ದ ಮೂರುವರೆ ಲಕ್ಷ ರೂ. ಮೌಲ್ಯದ 79 ಗ್ರಾಂ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಆರು ವರ್ಷದ ಬಾಲಕನನ್ನು ಕರೆದು ಚಿನ್ನ ಕದ್ದು ಇಬ್ಬರು ಬೈಕ್ನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ರಾಘವೇಂದ್ರ ಸದ್ಯ ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ.
ಟ್ರಾಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅರೆಸ್ಟ್:
ಕಲಬುರಗಿ: ಟ್ರ್ಯಾಕ್ಟರ್ ಟ್ರಾಲಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಶಹಬಾದ್ ಪೋಲಿಸರ ಬಲೆಗೆ ಖದೀಮರು ಬಿದ್ದಿದ್ದಾರೆ. ಸಿದ್ದಾಥ್೯, ಅನೀಲ್ ರಾಠೋಡ್ ಬಂಧಿತರು. ಬಂಧಿತರು ಕಲಬುರಗಿ ಜಿಲ್ಲೆಯ ನಿವಾಸಿಗಳು. ಈ ಹಿಂದೆ ಕಳ್ಳತನ ಮಾಡಿದ್ದ 4 ಟ್ರ್ಯಾಕ್ಟರ್ ಟ್ರಾಲಿಗಳನ್ನ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.