ಬೆಂಗಳೂರು: 4 ತಿಂಗಳ ಹಿಂದೆ ಮದುವೆಯಾದ ನವ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೋಹಳ್ಳಿಯಲ್ಲಿ ನಡೆದಿದೆ.

ಹರ್ಷಿತಾ(19), ಪುನೀತ್(21) ಆತ್ಮಹತ್ಯೆಗೆ ಶರಣಾದ ದಂಪತಿ. ಪೋಷಕರ ವಿರೋಧದ ನಡುವೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಗೆ ಎರಡೂ ಕಡೆಯಿಂದ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಎರಡು ಮನೆಯವರ ಕಡೆಯಿಂದ ಬೆದರಿಕೆ ಇತ್ತು ಎನ್ನಲಾಗಿದೆ. ಇದನ್ನೂ ಓದಿ : ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

ಇಂದು ಸಂಜೆ ನಾಲ್ಕು ಗಂಟೆಯ ವೇಳೆ ಹರ್ಷಿತಾ ಮನೆಯಲ್ಲೇ ನೇಣಿಗೆ ಶರಣಾಗಲು ಯತ್ನಿಸಿದ್ದಳು. ಆಸ್ಪತ್ರೆಗೆ ಸಾಗಿಸುವ ವೇಳೆ ಪತ್ನಿ ಹರ್ಷಿತಾ ಮೃತಪಟ್ಟಿದ್ದಳು. ಇದರಿಂದ ನೊಂದ ಪತಿ ಪುನೀತ್ ವಾಪಸ್ ಬಂದು ಅದೇ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಬೆಂಗಳೂರಿನಲ್ಲಿ ನವ ದಂಪತಿ ಆತ್ಮಹತ್ಯೆಗೆ ಶರಣು appeared first on Public TV.

Source: publictv.in

Source link