ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಕಠಿಣ ಲಾಕ್​ಡೌನ್​ ಇರಲಿದೆ. ನಿನ್ನೆಯಿಂದಲೇ ಕರ್ಫ್ಯೂ ನಡುವೆ ಸುಖಾಸುಮ್ಮನೆ ಹೊರಗೆ ಓಡಾಡುತ್ತಿದ್ದವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ತಿದ್ದು, ಬಿಸಿ ಮುಟ್ಟಿಸಿದ್ದಾರೆ.

ನಿನ್ನೆ ಒಂದೇ ದಿನ ಬೆಂಗಳೂರು ನಗರದಲ್ಲೇ ಪೊಲೀಸರು 1984 ಬೈಕ್​​​, 99 ಆಟೋ ಹಾಗೂ 144 ಕಾರ್​ಗಳ ಸೇರಿದಂತೆ ಒಟ್ಟು 2,227ಕ್ಕೂ ಅಧಿಕ ವಾಹನಗಳನ್ನ ಸೀಜ್​ ಮಾಡಿದ್ದಾರೆ. ಅಲ್ಲದೆ 23 ವಾಹನಗಳ ಮೇಲೆ ​ವಿಪತ್ತು ನಿರ್ವಹಣೆ ಕಾಯ್ದೆಯಡಿ ಕೇಸ್​​​ ದಾಖಲು ಮಾಡಿದ್ದಾರೆ.

 

ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿಬೇಕು ಅಂತ ಪೊಲೀಸರು ಮನವಿ ಮಾಡಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

The post ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 2,227 ವಾಹನಗಳು ಸೀಜ್​​ appeared first on News First Kannada.

Source: newsfirstlive.com

Source link