ಬೆಂಗಳೂರಿನಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ! ಮನೆ ಕಳೆದುಕೊಂಡ ವೃದ್ಧೆ ಕಣ್ಣೀರು | There is constant rain in Bangalore and old women who lost his house is in tears


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಜನರ ಜೀವನ ಅಸ್ತವ್ಯಸ್ಥವಾಗಿದೆ. ವಾಹನ ಸವಾರರು ಮಳೆ ನೀರಿನಲ್ಲಿ ಪರದಾಡುತ್ತಿದ್ದಾರೆ. ಇನ್ನು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಕಂಗಾಲಾಗಿದ್ದಾರೆ. ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಒಮ್ಮೊಮ್ಮೆ ಜಿಟಿ ಜಿಟಿ ಮಳೆ, ಮತ್ತೊಮ್ಮೆ ಧೋ ಅಂತ ಸುರಿಯುತ್ತಿದೆ. ಮಳೆಯಿಂದ ಸಾಲು ಸಾಲಾಗಿ ಅವಾಂತರ ದರ್ಶನವಾಗುತ್ತಿದೆ. ವರುಣಾರ್ಭಟಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ಬಾರಿ ಅವಾಂತರವೇ ಸೃಷ್ಟಿಯಾಗಿದೆ. ದೇವನಹಳ್ಳಿ ತಾಲೂಕಿನ ಕೋಡಿಮಂಚೇನಹಳ್ಳಿ ಕೆರೆ ಕೋಡಿ ಬಿದ್ದು ಅಪಾರ ಹಾನಿಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿದ್ದ ತೋಟದ ಬೆಳೆ ಹಾನಿಯಾಗದ್ದು, ರೈತರು ಹೈರಾಣಾಗಿದ್ದಾರೆ. ಕಟಾವು ಹಂತಕ್ಕೆ ಬಂದಿದ್ದ ಸಾಕಷ್ಟು ಬೆಳೆಗಳು ಜಲಾವೃತವಾಗಿವೆ. ಇನ್ನು ಬೆಟ್ಟದ ಸಾಲುಗಳಿಂದ ನೀರಿ ಕೆರೆಗೆ ಹರಿದು ಬರುತ್ತಿದೆ.

ಇದನ್ನೂ ಓದಿ

ಮೈಸೂರಿನಲ್ಲಿ ಮಳೆ ಅವಾಂತರಕ್ಕೆ ರೊಚ್ಚಿಗೆದ್ದ ಜನರು; ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ತೀವ್ರ ಆಕ್ರೋಶ

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಯೋಚಿಸಿ

TV9 Kannada


Leave a Reply

Your email address will not be published. Required fields are marked *