
ರೂಫ್ ಟಾಪ್ ಕುಸಿತವಾಗಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ
ಘಟನೆಯಲ್ಲಿ ಇಬ್ಬರು ಕಾರ್ಮಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೇಲ್ಚಾವಣಿಯಲ್ಲಿ ಇಬ್ಬರು ಕಾರ್ಮಿಕರಾದ ರಫಿಸಾಬ್, ಬಸವರಾಜು ಸಿಲುಕಿದ್ದಾರೆ.
ಬೆಂಗಳೂರು: ನಗರದಲ್ಲಿ ಸೇಂಟ್ ಮಾರ್ಥಾಸ್ ಆಸ್ಪತ್ರೆ (Saint Marthas Hospital) ಬಳಿ ನಿರ್ಮಾಣ ಹಂತದ ಕಟ್ಟಡದ ರೂಫ್ ಟಾಪ್ (Roof Top) ಕುಸಿತವಾಗಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕುಸಿಯುವ ಶಬ್ದ ಕೇಳಿ ಬರುತ್ತಿದ್ದಂತೆ ಮೂವರು ಕಾರ್ಮಿಕರು ಹೊರಗೆ ಓಡಿಬಂದಿದ್ದಾರೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೇಲ್ಚಾವಣಿಯಲ್ಲಿ ಇಬ್ಬರು ಕಾರ್ಮಿಕರಾದ ರಫಿಸಾಬ್, ಬಸವರಾಜು ಸಿಲುಕಿದ್ದಾರೆ. ಕಾರ್ಮಿಕರ ರಕ್ಷಣೆಗಾಗಿ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ.