ಬೆಂಗಳೂರಿನಲ್ಲಿ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ; ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್‌ ಸುಟ್ಟು ಭಸ್ಮ | Negligence of Bescom staff TV fridge washing machine burned at home in Bengaluru


ಬೆಂಗಳೂರಿನಲ್ಲಿ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ; ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್‌ ಸುಟ್ಟು ಭಸ್ಮ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೆಸ್ಕಾಂ(Bescom) ಸಿಬ್ಬಂದಿ ನಿರ್ಲಕ್ಷ್ಯದಿಂದ ಬೆಂಗಳೂರಿನ ರಾಮಮೂರ್ತಿನಗರದಲ್ಲಿನ ಅಂಬೇಡ್ಕರ್ ಏರಿಯಾದ ಮನೆಯೊಂದರಲ್ಲಿ ಅವಾಂತರ ಸೃಷ್ಟಿಯಾಗಿದೆ. ನಿನ್ನೆ (ನವೆಂಬರ್ 12) ಏಕಾಏಕಿ ಹೈ ವೋಲ್ಟೇಜ್ ವಿದ್ಯುತ್​ನಿಂದ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್‌ (washing machine) ಸೇರಿ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಭಸ್ಮವಾಗಿದೆ. 20ಕ್ಕೂ ಹೆಚ್ಚು ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದ್ದು, ಬೆಸ್ಕಾಂ ಸಿಬ್ಬಂದಿ ವಿರುದ್ಧ ಮನೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿಯಲ್ಲಿ ಕಸಗುಡಿಸುವ ಕೆಲಸ, ಮನೆ ಕೆಲಸ, ಕೂಲಿ ಕೆಲಸ ಮಾಡಿಕೊಂಡು ಇಎಂಐನಲ್ಲಿ ಈ ಎಲ್ಲಾ ವಸ್ಯಗಳನ್ನು ಖರೀದಿ ಮಾಡಿದ್ದೇವು. ಬೆಸ್ಕಾಂ ಅಧಿಕಾರಿಗಳ‌ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ ಎಂದು ಮನೆ ಮಾಲೀಕರು ಕಣ್ಣೀರು ಹಾಕಿದ್ದಾರೆ.

ಚಿಕ್ಕಬಳ್ಳಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಪೆಟ್ರೋಲ್ ಬಂಕ್​​ನಲ್ಲಿನ ಯಂತ್ರಗಳು ಸುಟ್ಟು ಭಸ್ಮ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ ಹೊತ್ತಿಕೊಂಡು ಪೆಟ್ರೋಲ್ ಪಂಪ್ ಮಾಡುವ ಯಂತ್ರಗಳು ಸುಟ್ಟುಕರಕಲಾಗಿದೆ. ಇದೆ ವೇಳೇ ಸಂಭವಿಸಬಹುದಾಗಿದ್ದ ಭಾರಿ‌ ಅನಾಹುತವೊಂದು ತಪ್ಪಿದೆ. ಘಟನೆ ಶಿಡ್ಲಘಟ್ಟ ತಾಲೂಕು ಮಾಳಮಾಚನಹಳ್ಳಿ ಬಳಿಯ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಶಿಡ್ಲಘಟ್ಟ- ಜಂಗಮಕೋಟೆ ರಸ್ತೆಯಲ್ಲಿನ ಮಾಳಮಾಚನಹಳ್ಳಿ ಬಳಿ ಇರುವ ಭಾರತ್ ಪೇಟ್ರೋಲ್ ಬಂಕ್ ನಲ್ಲಿ ಶುಕ್ರವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಪೆಟ್ರೋಲ್ ಪಂಪ್ ಮಾಡುವ ಮಿಷನ್​ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಆಗ ಪೆಟ್ರೊಲ್ ಬಂಕ್ ನಲ್ಲಿ ಮಲಗಿದ್ದ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆಯಾಗಿ ಪೆಟ್ರೋಲ್ ಬಂಕ್ ಗೆ ಬೆಂಕಿ ಹೊತ್ತಿಕೊಂಡು ಯಂತ್ರಗಳು ಮಾತ್ರ ಸುಟ್ಟು ಹೋಗಿದ್ದು, ಒಂದು ವೇಳೆ ಭೂಮಿಯಲ್ಲಿನ ಪೆಟ್ರೊಲ್ ಶೇಖರಣಾ ಟ್ಯಾಂಕ್ ಗಳಿಗೇನಾದರೂ ಬೆಂಕಿ ತಗುಲಿ ಬ್ಲಾಸ್ಟ್ ಆಗಿದ್ದರೆ ಭಾರಿ ಅನಾಹುತ ನಡೆದು ಹೊಗುವುದಿತ್ತು.

ಇದನ್ನೂ ಓದಿ:
ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಟೆಸ್ಲಾ ಕಾರು; 97 ಲಕ್ಷ ರೂ. ಮೌಲ್ಯದ ವಿದ್ಯುತ್​ ಚಾಲಿತ ಕಾರು ಸುಟ್ಟು ಕರಕಲು

ರೈತರು, ಮಹಿಳೆಯರ ಮೇಲೆ ಪೊಲೀಸರ ದಬ್ಬಾಳಿಕೆ; ಧರಣಿ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಜಮೀನು ಮಾಲೀಕ

TV9 Kannada


Leave a Reply

Your email address will not be published.