ಬೆಂಗಳೂರು: ನಗರದಲ್ಲಿ ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಮೇಲೆ ಹಲ್ಲೆಗೈದು ಕೊಲೆ ಮಾಡಲಾಗಿದೆ.

ಈ ಹಿಂದೆ ರೇಖಾ ಅವರ ಪತಿ ಕದಿರೇಶ್ ಅವರ ಹತ್ಯೆ ನಡೆದಿತ್ತು. ಇಂದು ದುಷ್ಕರ್ಮಿಗಳು, ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್​​​ನಲ್ಲಿ ರೇಖಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಕೂಡಲೇ ರೇಖಾರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ  ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ದೌಡಾಯಿಸಿದ್ದಾರೆ.

ಅಂದ್ಹಾಗೆ 2108ರ ಫೆಬ್ರವರಿ 8ರಂದು ಶೋಭನ್ ಮತ್ತು ಗ್ಯಾಂಗ್ ಕದಿರೇಶ್ ಅವರನ್ನ ಕೊಲೆ ಮಾಡಿತ್ತು. ಶೋಭನ್ ಗ್ಯಾಂಗ್​​ ಜೊತೆ ಇದ್ದ ಹಳೇ ರೌಡಿಶೀಟರ್ ಪೀಟರ್​ನಿಂದ ಈಗ ರೇಖಾ ಅವರ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ರೇಖಾ ಅವರು ಫುಡ್ ಕಿಟ್ ಹಂಚಲು ಕಚೇರಿಗೆ ಬಂದಿದ್ದ ವೇಳೆ ಜೊತೆಗೆ ಇದ್ದ ಪೀಟರ್ ಮತ್ತು ಸಹಚರರಿಂದ ಹಲ್ಲೆ ನಡೆಸಲಾಗಿದೆ. ಕೊಲೆಗೆ ಮುಂಚೆಯೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು ಸಿಸಿ ಕ್ಯಾಮಾರಾಗಳನ್ನು ಮೇಲ್ಭಾಗಕ್ಕೆ ತಿರುಗಿಸಿದ್ದರು. ಸಾಕ್ಷಿ ಸಿಗದಂತೆ ಪ್ಲಾನ್ ಮಾಡಿ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

 

The post ಬೆಂಗಳೂರಿನಲ್ಲಿ ಭೀಕರ ಕೃತ್ಯ: ಮಾಜಿ ಕಾರ್ಪೊರೇಟರ್ ರೇಖಾ ಕೊಲೆ appeared first on News First Kannada.

Source: newsfirstlive.com

Source link