ಬೆಂಗಳೂರಿನಲ್ಲಿ ಮತ್ತೆ ಚೆಲ್ಲಿದ ರಕ್ತ; ಹಾಡಹಗಲೇ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ನಡೆದಿದೆ. ಹಾಡಹಗಲೇ ನಡೆದ ಈ ಕೃತ್ಯಕ್ಕೆ ಸಿಲಿಕಾನ್​​ ಸಿಟಿ ಜನರು ಬೆಚ್ಚಿಬಿದ್ದಿದ್ದಾರೆ.

ಲಿಖಿತ್ (21) ಮೃತ ಯುವಕ. ನಯೀದ್ ಅನ್ನೋ ಯುವಕ ನಿಂದ ಕೃತ್ಯ ಎಸಗಲಾಗಿದೆ ಎನ್ನಲಾಗಿದ್ದು ಮೃತ ಲಿಖಿತ್​ ಮತ್ತು ಆರೋಪಿ ನಯೀದ್ ಇಬ್ಬರು ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದು ​ಕ್ಷುಲ್ಲಕ ಕಾರಣಕ್ಕೆ ನಯೀದ್ ಮತ್ತು ಲಿಖಿತ್ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಪರಿಣಾಮ ಕುಡಿದ ಅಮಲಿನಲ್ಲಿ ಇವರಿಬ್ಬರ ನಡುವೆ ಗಲಾಟೆ ಶುರುವಾಗಿದೆ ಎನ್ನಲಾಗಿದ್ದು ಆರೋಪಿ ಯುವಕನಿಗೆ ಬರ್ಬರವಾಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಚ್​ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

News First Live Kannada

Leave a comment

Your email address will not be published. Required fields are marked *