ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ.. ಅಪಾರ್ಟ್ಮೆಂಟ್​ನ 2 ಫ್ಲ್ಯಾಟ್​ ಧಗ ಧಗ..!


ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಎಲೆಕ್ಟ್ರಾನಿಕ್​ ಸಿಟಿ ಸಮೀಪದ ಸಂಪಿಗೆ ನಗರದ ವಸುಂದರ ಲೇ ಔಟ್​ನ ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ದುರಂತ ನಡೆದಿದೆ.

ಆನೇಕಲ್ ತಾಲೂಕಿನ ಸಂಪಿಗೆ ನಗರದ ವಸುಂಧರಾ ಲೇ ಔಟ್ ನಲ್ಲಿನ ಅಪಾರ್ಟ್ ಮೆಂಟ್​ನ ಎರಡು ಫ್ಲ್ಯಾಟ್​​ಗಳಲ್ಲಿ ಅಗ್ನಿ ದುರಂತ ಸಂಭವಿಸಿದೆ. ಫ್ಲ್ಯಾಟ್​​ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ನಿವಾಸಿಗಳು ಮನೆಯಿಂದ ಓಡಿಬಂದು ಜೀವನ ರಕ್ಷಿಸಿಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯವನ್ನು ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *