ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮೊನ್ನೆ, ನಿನ್ನೆ ಗಂಟೆಗೂ ಅಧಿಕ ಕಾಲ ಸುರಿದ ಮಳೆ
ಡೋಣಿ ನದಿ ತಟದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಗೃಹ ಪ್ರವೇಶದ ದಿನವೇ ಮನೆಗೆ ನುಗ್ಗಿದ ಮಳೆ ನೀರು
ಬೆಂಗಳೂರು: ಗೃಹ ಪ್ರವೇಶದ ದಿನವೇ ಮನೆಗೆ ಮಳೆ (heavy Rain) ನೀರು ನುಗ್ಗಿದ್ದು, ಶಾಮಿಯಾನ ಹಾಕಿ ತಯಾರಿ ಮಾಡಿಕೊಂಡಿದ್ದವರಿಗೆ ಮಳೆರಾಯನ ಆರ್ಭಟ ಶಾಕ್ ನೀಡಿದೆ. ಯಲಚೇನಹಳ್ಳಿ ವಾರ್ಡ್ನ ಕನಕನಗರದಲ್ಲಿ ಘಟನೆ ನಡೆದಿದೆ. ನಿನ್ನೆ ಸುರಿದ ಮಳೆಗೆ ಭುಜದವರೆಗೆ ನೀರು ಬಂದಿತ್ತು. ಬಂಧು ಬಳಗದವರು ಅಕ್ಕಪಕ್ಕದವರ ಮನೆಯಲ್ಲಿದ್ದಾರೆ. 300 ಜನರಿಗೆ ಅಡುಗೆ ಮಾಡಿಸಿದ್ದು, ತಿಂದಿದ್ದು ಕೇವಲ 25 ಜನ ಅಷ್ಟೆ. ಮಾಡಿದ್ದ ಅಡುಗೆ ವ್ಯರ್ಥವಾಗಿದ್ದು, ವಾಹನಗಳಿಗೂ ಡ್ಯಾಮೇಜ್ ಆಗಿವೆ. ಈ ಕುರಿತು ಕನಕನಗರದ ನಿವಾಸಿಗಳು ಮಾತನಾಡಿದ್ದು, ಒಂದು ಲಕ್ಷ ಖರ್ಚು ಮಾಡಿ ಗೃಹಪ್ರವೇಶ ಮಾಡಿದ್ವಿ. ಎಲ್ಲವೂ ಮಳೆಯಿಂದ ಹಾಳಾಗಿ ಹೋಯ್ತು. ಮಾಡಿದ್ದ ಅಡುಗೆಯನ್ನ ತಿನ್ನೋಕೂ ಆಗಲಿಲ್ಲ. ಊಟದ ಟೇಬಲ್ಗಳು ತೇಲುತ್ತಾ ಹೋಗ್ತಿದ್ವು. ನಿನ್ನೆ ಮಾಡಿದ್ದ ಅರೆಂಜ್ಮೆಂಟ್ಸ್ ಎಲ್ಲವೂ ಹಾಳಾಯ್ತು. ಚರಂಡಿ ವ್ಯವಸ್ಥಿತವಾಗಿ ಇಲ್ಲದ್ದಕ್ಕೆ ಹೀಗಾಗಿದೆ. ಯಾವ ಅಧಿಕಾರಿಗಳು, ಜನ ಪ್ರತಿನಿಧಿಗಳು ಬಂದಿಲ್ಲ. ಎಲೆಕ್ಷನ್ ಬಂದಾಗ ಅವ್ರು ಬರ್ತಾರೆ ಅಷ್ಟೇ ಎಂದು ಕನಕನಗರದ ನಿವಾಸಿಗಳು ಅಸಮಾಧಾನ ಹೊರ ಹಾಕಿದರು.