ಬೆಂಗಳೂರಿನಲ್ಲಿ ಶವಪತ್ತೆ ಪ್ರಕರಣ: ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಬಹಿರಂಗ – Bengaluru body-detection case deceased was in constant touch with woman Bangalore news in kannada


ಬೆಂಗಳೂರಿನಲ್ಲಿ ಬಾಲಸುಬ್ರಮಣ್ಯನ್ ಶವ ಪತ್ತೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಶವಪತ್ತೆ ಪ್ರಕರಣ: ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರಿನಲ್ಲಿ ಶವಪತ್ತೆ ಪ್ರಕರಣ: ಸಿಡಿಆರ್​ ಪರಿಶೀಲಿಸಿದಾಗ ಮಹಿಳೆ ಜತೆ ನಿರಂತರ ಸಂಪರ್ಕದಲ್ಲಿರುವ ವಿಚಾರ ಬಹಿರಂಗ

ಬೆಂಗಳೂರು: ನಗರದಲ್ಲಿ ಬಾಲಸುಬ್ರಮಣ್ಯನ್(67) ಎಂಬವರ ಶವ ಪತ್ತೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ತಿಳಿದುಬಂದಿದೆ. ಮೃತ ಬಾಲಸುಬ್ರಮಣ್ಯನ್ ದೂರವಾಣಿ ಕರೆಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳ ಜೊತೆ ನಿರಂತರ ಸಂಪರ್ಕದಲ್ಲಿರುವ ವಿಚಾರ ತಿಳಿದುಬಂದಿದ್ದು, ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್​ ಬಳಿ ಕೊನೆಯ​ ಲೊಕೇಷನ್​ ತೋರಿಸುತ್ತಿದೆ. ಹೀಗಾಗಿ ಬಾಲಸುಬ್ರಮಣ್ಯನ್ ಸಂಪರ್ಕದಲ್ಲಿದ್ದ ಆ ಮಹಿಳೆ ಯಾರು ಎನ್ನುವ ಬಗ್ಗೆ ಪೊಲೀಸರಿಂದ ತನಿಖೆ ಆರಂಭಗೊಂಡಿದೆ.

ಏನಿದು ಪ್ರಕರಣ?

ನಾಪತ್ತೆಯಾಗಿದ್ದ ಟ್ರಾನ್ಸ್‌ಪೋರ್ಟ್‌ ಉದ್ಯಮ ಹೊಂದಿದ್ದ ಬಾಲಸುಬ್ರಮಣ್ಯನ್ ಮೃತದೇಹ ಬೆಂಗಳೂರಿನ ಜೆ.ಪಿ ನಗರ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್​ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣ್ಯನ್ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದರು. ಆದರೆ ನವೆಂಬರ್ 17ರಂದು ಬಾಲ ಸುಬ್ರಮಣಿಯನ್ ಅವರ ಮೃತ ದೇಹ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿತ್ತು.

TV9 Kannada


Leave a Reply

Your email address will not be published.