ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಹಿನ್ನೆಲೆ‌: ಸಂಘಟನೆಗಳ‌ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಹೈಕೋರ್ಟ್ | Traffic in Bangalore reason: High Court refuses to allow organizations to procession


ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಹಿನ್ನೆಲೆ‌: ಸಂಘಟನೆಗಳ‌ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಹೈಕೋರ್ಟ್

ಹೈಕೋರ್ಟ್

ಬೆಂಗಳೂರು: ನಗರದಲ್ಲಿ ಸಂಚಾರದಟ್ಟಣೆಗೆ ಕಾರಣವಾಗುವ ಹಿನ್ನೆಲೆ‌ ಎಐಟಿಯುಸಿ ಸೇರಿದಂತೆ ಸಂಘಟನೆಗಳ‌ ಮೆರವಣಿಗೆ ಅನುಮತಿಯನ್ನು ಹೈಕೋರ್ಟ್ (High Court) ನಿರಾಕರಿಸಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಕಾರ್ಮಿಕ ಸಂಘಟನೆಗಳು, ಮೇ 1ರಂದು ಬೆಂಗಳೂರಿನಲ್ಲಿ ಮೆರವಣಿಗೆಗೆ ಅನುಮತಿ ಕೋರಿದ್ದರು. ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್​​ವರೆಗೆ ಮೆರವಣಿಗೆ ಮಾಡಲಾಗುತ್ತಿದ್ದು, ಟೌನ್​ಹಾಲ್​ನಿಂದ ಫ್ರೀಡಂಪಾರ್ಕ್​ಗೆ ಅನುಮತಿ ಕೋರಿದ್ದರು. ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್​ಗೆ ತೆರಳಲು ಅನುಮತಿ ಬೇಕಿಲ್ಲ. ಆದರೆ ಮೆರವಣಿಗೆ ನಡೆಸಲು ಅನುಮತಿ ಸಾಧ್ಯವಿಲ್ಲ ಎಂದು ನ್ಯಾ.ಆರ್.ದೇವದಾಸ್, ನ್ಯಾ. ಕೆ.ಎಸ್. ಹೇಮಲೇಖಾ ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿಭಟನೆ, ಮೆರವಣಿಗೆಗಳಿಂದ ಸಂಚಾರದಟ್ಟಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರತಿಭಟನೆ, ಮೆರವಣಿಗೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು. ಫ್ರೀಡಂಪಾರ್ಕ್​ನಲ್ಲಿ ಮಾತ್ರ ಹೈಕೋರ್ಟ್ ಅನುಮತಿ ನೀಡಿದೆ.

ಸಂಚಾರದಟ್ಟಣೆಗೆ ಕಾರಣವಾಗದಂತೆ ಬೆಂಗಳೂರು ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ

ಬೆಂಗಳೂರಿನಲ್ಲಿ ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುವಂತಹ ಮೆರವಣಿಗೆ, ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿತ್ತು. ಹೈಕೋರ್ಟ್ ವಿಭಾಗೀಯ ಪೀಠ ಹಿಂದಿನ ಆದೇಶ ಮಾರ್ಪಡಿಸಿದೆ. ಕರಗ ಆಚರಣೆಗೆ ಅನುಮತಿ ಕೋರಿ ವಕೀಲ ವಿವೇಕ್ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಕರಗ ಬೆಂಗಳೂರಿನ 300 ವರ್ಷ ಹಳೆಯ ಸಾಂಸ್ಕೃತಿಕ ಆಚರಣೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವೆಂದು ವಾದ ಹಿನ್ನೆಲೆ ಸಂಚಾರದಟ್ಟಣೆಗೆ ಕಾರಣವಾಗದಂತೆ ಆಚರಣೆ ನಡೆಸಲು ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.

TV9 Kannada


Leave a Reply

Your email address will not be published. Required fields are marked *