ಬೆಂಗಳೂರಿನಲ್ಲಿ ಸೋಂಕಿನ ದರ ಶೇ 3 ರಷ್ಟಾಗಿದೆ; ಜನರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು: ಸಚಿವ ಕೆ. ಸುಧಾಕರ | 3% of Covid infection positive rate Increased in Bengaluru People should get vaccine K Sudhakar


ಬೆಂಗಳೂರಿನಲ್ಲಿ ಸೋಂಕಿನ ದರ ಶೇ 3 ರಷ್ಟಾಗಿದೆ; ಜನರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು: ಸಚಿವ ಕೆ. ಸುಧಾಕರ

ಆರೋಗ್ಯ ಸಚಿವ ಕೆ.ಸುಧಾಕರ್

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನಲೆ ಇಂದು (ಜೂನ್​ 13) ರಂದು  ಕೊವಿಡ್ ತಾಂತ್ರೀಕ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವ ಕೆ. ಸುಧಾಕರ ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ 3 ರಷ್ಟಾಗಿದೆ, ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಎಲ್ಲರು ಲಸಿಕೆ ಪಡೆಯಬೇಕಿದೆ ಎಂದು ಸೂಚನೆ ನೀಡಿದರು.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ (Covid) ಸೋಂಕು ಏರಿಕೆಯಾಗುತ್ತಿರುವ ಹಿನ್ನಲೆ ಇಂದು (ಜೂನ್​ 13) ರಂದು  ಕೊವಿಡ್ ತಾಂತ್ರೀಕ ಸಲಹಾ ಸಮಿತಿ (covid technical advisory committee) ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವ ಕೆ. ಸುಧಾಕರ (K Sudhakar)  ಮಾತನಾಡಿ ಸಭೆಯಲ್ಲಿ ಕೊವಿಡ್ ಏರಿಕೆ ಹಾಗೂ ಮುಂಜಾಗ್ರತೆ ಬಗ್ಗೆ ಕೊವಿಡ್ ತಾಂತ್ರೀಕ ಸಲಹಾ ಸಮಿತಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ವಿದೇಶ ಹಾಗೂ ದೇಶದಲ್ಲಿ ಯಾವ ರೀತಿ ಸೋಂಕು ಏರಿಕೆಯಾಗಿದೆ ಇಳಿಕೆಯಾಗಿದೆ ಅಂತಾ ಚರ್ಚೆ ಮಾಡಲಾಗಿದೆ. ಸದ್ಯಕ್ಕೆ ಸಾವು ನೋವು ಸದ್ಯಕ್ಕೆ ಇಲ್ಲ. ಮೂರು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಕೇಸ್ ಏರಿಕೆಯಾಗಿದೆ. ನಿನ್ನೆ  ಎಂದು ತಿಳಿಸಿದರು.

ಸದ್ಯ ಕೊರೊನಾ ಸಂಖ್ಯೆ ಬೆಂಗಳೂರಿನಲ್ಲಿ ಇದ್ದರು ತೀವ್ರತೆ ಇಲ್ಲ. ಆಸ್ಪತ್ರೆ ದಾಖಲಾತಿ, ಸಾವು ಕಡಿಮೆಯಾಗಿದೆ. ಸಭೆಯಲ್ಲಿ ದಕ್ಷಿಣ ಭಾರತ WHO ಪ್ರತಿನಿಧಿ ಭಾಗಿಯಾಗಿದ್ದರು. ಕಡ್ಡಾಯ ವ್ಯಾಕ್ಸಿನ್ ಮಾಡೊದಕ್ಕೆ ಆಗದೇ ಇದ್ದರು. ಆರೋಗ್ಯದ ದೃಷ್ಟಿಯಿಂದ ಎಲ್ಲರು ಲಸಿಕೆ ಪಡೆಯಬೇಕಿದೆ ಎಂದು ಸೂಚನೆ ನೀಡಿದರು.

ಇದನ್ನು ಓದಿ: ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರಿನಲ್ಲಿ ಮೂರು ಪಟ್ಟು ಕೊರೊನಾ ಹೆಚ್ಚಳ

 ನಗರದಲ್ಲಿ ಕಳೆದ 10 ದಿನಗಳಲ್ಲಿ ಕೊವಿಡ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ. 10 ದಿನಗಳ ಹಿಂದೆ ಶೇ 1.1ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ 2.9ಕ್ಕೆ ಹೆಚ್ಚಾಗಿದೆ. ಬಿಬಿಎಂಪಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಮೇ 31ರಂದು 178 ಪ್ರಕರಣಗಳು ವರದಿಯಾಗಿದ್ದರೆ, ಜೂನ್ 10ರಂದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ 494 ದಾಟಿದೆ. ನಗರದ 10 ವಾರ್ಡ್ಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪೈಕಿ 8 ವಾರ್ಡ್ಗಳು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇರುವುದು ಗಮನಾರ್ಹ ಅಂಶ. ಇತರ ಎರಡು ವಾರ್ಡ್ಗಳು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿವೆ.

ಇದನ್ನು ಓದಿ: ಕಾಫಿನಾಡು ಯೋಧನ ಸಾವಿನ ಸುತ್ತ ಅನುಮಾನಗಳ ಹುತ್ತ, ಏನಾಯ್ತು ರೈಲು ಪ್ರಯಾಣದ ವೇಳೆ?

ಸೋಂಕು ಬಿಗಡಾಯಿಸಿರುವ ಕ್ಲಸ್ಟರ್​ಗಳು: 

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೊವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ಕ್ಲಸ್ಟರ್​ಗಳ ಸಂಖ್ಯೆಯು ಕಳೆದ 10 ದಿನಗಳಲ್ಲಿ 5ರಿಂದ 12ಕ್ಕೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ ಐದು ಹೊಸ ಕ್ಲಸ್ಟರ್​ಗಳು ವರದಿಯಾಗಿವೆ. 12 ಕ್ಲಸ್ಟರ್​ಗಳ ಪೈಕಿ 11 ಮಹದೇವಪುರ ವಾರ್ಡ್​ನಲ್ಲಿಯೇ ಇವೆ.

ಒಂದು ವ್ಯಕ್ತಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟ ನಂತರ ಇಡೀ ಕುಟುಂಬದ ಎಲ್ಲರೂ ಪಾಸಿಟಿವ್ ಆಗುತ್ತಿದ್ದಾರೆ. 11 ಕ್ಲಸ್ಟರ್​ಗಳ ಪೈಕಿ 10 ಕ್ಲಸ್ಟರ್​ಗಳು ಅಪಾರ್ಟ್​ಮೆಂಟ್​ಗಳೇ ಆಗಿವೆ.

ರಾಜ್ಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.