ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್​ಗೆ ಪ್ಲ್ಯಾನ್; ವಿಧಾನಸೌಧದಲ್ಲಿಯೂ ಓಪನ್ ಆಗುತ್ತಾ ಇಂದಿರಾ ಕ್ಯಾಂಟೀನ್? | Kannada News | Plan for 250 Indira Canteens in Bangalore, Indira canteen opening in Vidhansouda too


ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕ್ಯಾಂಟೀನ್‌ಗಳಿಗೆ ಮತ್ತೆ ಮರುಜೀವ ಸಿಕ್ಕಿದ್ದು, ಈಗಾಗಲೇ ಬಿಬಿಎಂಪಿಯಿಂದ ಅಗತ್ಯ ಸಿದ್ಧತೆಗಳು ಆರಂಭವಾಗಿವೆ. ಇನ್ನು ಹೊಸ ಊಟದ ಮೆನುನೊಂದಿಗೆ ಬಡವರ ಫೈ ಸ್ಟಾರ್​ ಇಂದಿರಾ ಕ್ಯಾಂಟೀನ್ ಬಾಗಿಲು ತೆರೆಯಲಿದ್ದು, ಬಿಬಿಎಂಪಿಯಿಂದ ಸರ್ಕಾರಕ್ಕೆ ಬೆಲೆ ಏರಿಕೆ ಪ್ರಸ್ತಾವನೆ ನೀಡಿದೆ.

ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್​ಗೆ ಪ್ಲ್ಯಾನ್; ವಿಧಾನಸೌಧದಲ್ಲಿಯೂ ಓಪನ್ ಆಗುತ್ತಾ ಇಂದಿರಾ ಕ್ಯಾಂಟೀನ್?

ಇಂದಿರಾ ಕ್ಯಾಂಟೀನ್​

ಬೆಂಗಳೂರು: ಬಡವರಿಗೆ ಅತೀ ಕಡಿಮೆ ಬೆಲೆಯಲ್ಲಿ ಅನ್ನ ನೀಡುವ ರಾಜ್ಯದ ‘ಇಂದಿರಾ ಕ್ಯಾಂಟೀನ್​ಗೆ (Indira Canteen) ಕಾಂಗ್ರೆಸ್ ಸರ್ಕಾರ ಮರುಜೀವ ನೀಡಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್​ ಅನ್ನು ಕಡೆಗಣಿಸಿತ್ತು. ಇದೀಗ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕ್ಯಾಂಟೀನ್‌ಗಳಿಗೆ ಮತ್ತೆ ಮರುಜೀವ ಸಿಕ್ಕಿದ್ದು, ಈಗಾಗಲೇ ಬಿಬಿಎಂಪಿ(BBMP)ಯಿಂದ ಅಗತ್ಯ ಸಿದ್ಧತೆಗಳು ಆರಂಭವಾಗಿವೆ. ಇನ್ನು ಹೊಸ ಊಟದ ಮೆನುನೊಂದಿಗೆ ಬಡವರ ಫೈ ಸ್ಟಾರ್​ ಇಂದಿರಾ ಕ್ಯಾಂಟೀನ್ ಬಾಗಿಲು ತೆರೆಯಲಿದೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್​ಗೆ ಅವರಿಂದಲೇ ಮೆನು ರೆಡಿಯಾಗಲಿದೆ. ಈ ಮೂಲಕ ಬೆಂಗಳೂರಿನಲ್ಲಿ 250 ಇಂದೀರಾ ಕ್ಯಾಂಟೀನ್​ ತೆರೆಯಲು ಪ್ಲ್ಯಾನ್ ಮಾಡಲಾಗಿದೆ. ಇನ್ನು ಸರ್ಕಾರ ಬೇಡಿಕೆ ಇಟ್ರೆ, ವಿಧಾನಸೌಧದಲ್ಲಿಯೂ ಇಂದೀರಾ ಕ್ಯಾಂಟೀನ್ ಓಪನ್​ ಆಗಲಿದ್ದು, ಸಚಿವ ಶಾಸಕರಿಗೂ ಇಂದಿರಾ ಕ್ಯಾಂಟೀನ್ ಪುಡ್ ಹೋಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

ಇಂದಿರಾ ಕ್ಯಾಂಟೀನ್​ನಲ್ಲಿ ಇನ್ಮುಂದೆ ಬಡವರಿಗೆ ಸಿಗಲಿದೆ ವೆರೈಟಿ ತಿಂಡಿ ಊಟ

ಹೌದು ಬೆಳಗಿನ ತಿಂಡಿಗೆ ವಿಶೇಷ ತಿಂಡಿ ಖ್ಯಾದ್ಯ, ಮಧ್ಯಾಹ್ನಕ್ಕೆ ಭರ್ಜರಿ ಪುಲ್ ಮಿಲ್ಸ್ ರೆಡಿಯಾಗಲಿದೆ. ಸೋಮುವಾರದಿಂದಲೇ ಮೊಬೈಲ್ ಕ್ಯಾಂಟೀನ್ ಶುರುವಾಗಲಿದ್ದು, ಇಂದಿರಾ ಕ್ಯಾಂಟೀನ್ ಆಹಾರದ ರೂಪರೇಶವನ್ನ ಸಿಎಂ ಸಿದ್ದರಾಮಯ್ಯ ಅವರು ಸಿದ್ದಪಡಿಸಲು ಮುಂದಾಗಿದ್ದಾರೆ. ಇಂದಿರಾ ಕ್ಯಾಂಟೀನ್ ನ್ಯೂ ಮೆನು ಹೀಗಿದೆ.

ತಿಂಡಿ – 2 ಇಡ್ಲಿ 1 ವಡೆ, ಉಪ್ಪಿಟ್ಟು – ಕೇಸರಿಬಾತ್, ಬಿಸಿಬೇಳೆ ಬಾತ್, ಪೂಳಿಯೋಗೆರೆ, ಚಿತ್ರಾನ್ನ , ವಾಂಗಿಬಾತ್, ಟೋಮ್ಯಾಟೋ ಬಾತ್, ರೈಸ್ ಬಾತ್ ಇರಲಿದ್ದು,  ಮಧ್ಯಾಹ್ನ ಊಟಕ್ಕೆ – ಸಿಂಗಲ್ ಚಪಾತಿ, ಒಂದು ವೆಜ್ ಪಲ್ಯಾ, ಕಪ್ ವೈಟ್ ರೈಸ್, ಸಾಂಬಾರ್​ ಹಾಗೂ ರಸಂ ಮುದ್ದೆ, ವೆಜ್ ಪಲ್ಯಾ. ಇನ್ನು ವಾರದಲ್ಲಿ ಮೂರು ದಿನ ಮಧ್ಯಾಹ್ನ ಸ್ವೀಟ್ , ಹೋಳಿಗೆ, ಅಕ್ಕಿಪಾಯಸ, ಕೇಸರಿ ಬಾತ್ ಸೀಗಲಿದೆ. ಇನ್ನು ರಾತ್ರಿ ಅನ್ನ ಸಾಂಬಾರ್​, ರೈಸ್ ಬಾತ್ ಇರಲಿದೆ.

TV9 Kannada


Leave a Reply

Your email address will not be published. Required fields are marked *